ತಮಿಳುನಾಡು ಚುನಾವಣೆಯಲ್ಲಿ ಸೋಲನ್ನುಂಡ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣಾಮಲೈ ಅವರು ಸೋಲು ಜೀವನದ ಒಂದು ಭಾಗ ಎಂದು ಉತ್ಸಾಹದ ನುಡಿಯನ್ನಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸೋಲುಗಳು ಜೀವನದ ಒಂದು ಭಾಗ. ಇಂತಹ ಸೋಲುಗಳನ್ನು ನಾನು ಬಹಳ ನೋಡಿದ್ದೇನೆ. ನಾನು ಗೆಲುವಿನ ಗುರಿ ಮುಟ್ಟಬೇಕಿತ್ತು. ಆದರೆ ಆಗಲಿಲ್ಲ. ಅರವಕುರಿಚ್ಚಿಯಲ್ಲಿ ಬಿಜೆಪಿ ಪರ ಮತ ಹಾಕಿದ 68 ಸಾವಿರಕ್ಕೂ ಅಧಿಕ ಜನರಿಗೆ ಧನ್ಯವಾದ ಎಂದು ತಿಳಿಸಿದರು. ಶ್ರಮಿಸಿ ಕೆಲಸ ಮಾಡಲು ಸೂಕ್ತ ಸಮಯ, ಬಿಜೆಪಿ ಕೆಲಸಗಳಿಗೆ ಸಂಪೂರ್ಣ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.