ಕಡಬ : ಕಾಣಿಯೂರಿನ ಮೂರು ಅಂಗಡಿಗಳಿಗೆ ಬೀಗ ಮುರಿದು ನುಗ್ಗಿದ ಕಳ್ಳರು ಕಳ್ಳತನ ನಡೆಸಿದ ಘಟನೆ ಮೇ.2ರಂದು ರಾತ್ರಿ ನಡೆದಿದೆ. ಸೆಲೂನು, ಚಿಕನ್ ಸೆಂಟರ್, ಜ್ಯೂಸು ಅಂಗಡಿಗಳಿಂದ ಕಳ್ಳತನ ನಡೆದಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಚಿಕನ್ ಸೆಂಟರ್ ನಲ್ಲಿ ಮೊಬೈಲ್ ನಂಬರ್ ನ್ನು ಪೇಪರ್ ಚೀಟಿನಲ್ಲಿ ʼಕಳ್ಳನ ನಂಬರ್ʼ ಎಂದು ನಮೂದಿಸಿದ್ದು ಕಂಡು ಬಂದಿದೆ.