ಮಾಣಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಬೈಪಾಸ್ ನಿರ್ಮಾಣದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸರ್ವಿಸ್ ರಸ್ತೆ ಹಳೀರ ಬಳಿ ಮಂಗಳೂರಿನಿಂದ ಹಾಸನಕ್ಕೆ ಕೋಕ್ ಸಾಗಿಸುತ್ತಿದ್ದ ಲಾರಿ ಮಂಗಳವಾರ ಬೆಳಗಿನ ಜಾವ ರಸ್ತೆ ಬದಿಯ ತೋಟಕ್ಕೆ ಪಲ್ಟಿ ಹೊಡೆದಿದೆ.

ಘಟನೆಯಲ್ಲಿ ಡ್ರೈವರ್ ಮತ್ತು ಕ್ಲೀನರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಫ್ಲೈ ಓವರ್ ಮತ್ತು ಅಂಡರ್ ಪಾಸ್ ನಿರ್ಮಿಸುವ ಕಡೆಗಳಲ್ಲಿ ತೀರಾ ಕಳಪೆ ಗುಣಮಟ್ಟದ ಮತ್ತು ಅಪಾಯಕಾರಿಯಾದ ತಾತ್ಕಾಲಿಕ ರಸ್ತೆಗಳನ್ನು ಗುತ್ತಿಗೆದಾರರು ನಿರ್ಮಿಸಿಕೊಡುವುದರಿಂದ ಅಪಘಾತಗಳು ಹೆಚ್ಚುತ್ತಲಿದೆನ್ನಲಾಗಿದೆ.

























