ಪುತ್ತೂರು : ಬೃಹತ್ ಮರವೊಂದು ಕಟ್ಟಡದ ಮೇಲೆ ಬಿದ್ದ ಘಟನೆ ಪುತ್ತೂರು ಸರಕಾರಿ ಆಸ್ಪತ್ರೆಯ ಬಳಿ ನಡೆದಿದೆ.

ಪುತ್ತೂರು ಸರಕಾರಿ ಆಸ್ಪತ್ರೆಯ ಗೇಟ್ ಬಳಿ ಇರುವ ಬೃಹತ್ ಮರವೊಂದು ಅಲ್ಲಿಯೇ ಸಮೀಪದಲ್ಲಿರುವ ಆಂಬ್ಯುಲೆನ್ಸ್ ಚಾಲಕರ ಕೊಠಡಿಯ ಮೇಲೆ ಬಿದ್ದಿದೆ.

ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಮರ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.




























