ಪುತ್ತೂರು: ದ್ವಿಚಕ್ರ ವಾಹನದ ಮೂಲಕ ಅಕ್ರಮವಾಗಿ ಮದ್ಯದ ಸಾಗಾಟ ಮಾಡಿ ಜನರಿಗೆ ಅಧಿಕ ಬೆಲೆ ಮಾರಾಟ ಮಾಡಲು ಯತ್ನಿಸುತ್ತಿದ್ದವರನ್ನು ಸಂಪ್ಯ ಠಾಣಾ ಎಸ್.ಐ ಉದಯ ರವಿ ನೇತೃತ್ವದ ಪೊಲೀಸರು ಪತ್ತೆ ಮಾಡಿ ಮೂವರನ್ನು ಬಂಧಿಸಿ, ಸಾಗಾಟ ಮಾಡುತ್ತಿದ್ದ ಮದ್ಯ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಕೊಂಡಿದ್ದಾರೆ.
ಕಾಸರಗೋಡು ಕುಂಬ್ಲಾಜೆ ನಿವಾಸಿಗಳಾದ ಪ್ರಜೇಶ್(30), ಶಶಿಧರ(37) ಹಾಗೂ ಶಂಕರ ನಾರಾಯಣ(45) ಬಂಧಿತ ಆರೋಪಿಗಳು.
ಸಂಪ್ಯ ಠಾಣಾ ವ್ಯಾಪ್ತಿಯ ಸಂಟ್ಯಾರ್ ಎಂಬಲ್ಲಿ ರೌಂಡ್ ಕರ್ತವ್ಯದಲ್ಲಿರುವ ಸಮಯದಲ್ಲಿ ಪಾಣಾಜೆ ಗ್ರಾಮದ ಕೊಂದಲ್ಕಾನ ಎಂಬಲ್ಲಿ 3 ಜನ ವ್ಯಕ್ತಿಗಳು ದ್ವಿಚಕ್ರ ವಾಹನಗಳಲ್ಲಿ ಯಾವುದೇ ಪರವಾನಿಗೆ ಮತ್ತು ದಾಖಲೆ ಇಲ್ಲದೇ ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು,
ಪಾಣಾಜೆ ಗ್ರಾಮದ ಕೊಂದಲ್ಕಾನ ಸೇತುವೆ ಬಳಿ ರಸ್ತೆ ಬದಿಯಲ್ಲಿ 3 ಜನ ವ್ಯಕ್ತಿಗಳು 2 ದ್ವಿಚಕ್ರ ವಾಹನಗಳಲ್ಲಿ ಮದ್ಯದ ಬಾಟಲಿಗಳು ಮತ್ತು ಸ್ಯಾಚೆಟ್‌ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ.
ಬಂಧಿತರಿಂದ 25.425 ಲೀಟರ್ ಮೈಸೂರ್ ಲ್ಯಾನ್ಸರ್ ವಿಸ್ಕಿ ಮತ್ತು 2 ದ್ವಿಚಕ್ರ ವಾಹನಗಳು ಹಾಗೂ ಮದ್ಯ ಮಾರಾಟದಿಂದ ಬಂದಿರುವ ಒಟ್ಟು ರೂ.1550 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.