ಇದೇನಾ ಲಾಕ್ ಡೌನ್ ಅಂದ್ರೆ?!!!! : ಕೊರೋನಾ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಅನ್ನುವ ಮಹಾ ಹೆಸರಿನೊಡನೆ ಸರಕಾರದ ನಿಯಮಾವಳಿಗಳು ಜನ್ಮ ತಾಳುತ್ತವೆ.. ಒಂದಷ್ಟು ಬ್ರೇಕ್, ಟಫ್ ರೂಲ್ಸ್ ಅನ್ನುವ ವಿಚಾರಗಳು ಬೇರೆ.. ಸರಕಾರದ ನಿಯಂತ್ರಣ ನಿಯಮ ಗಂಟೆಗೊಮ್ಮೆ ಬೇರೆ ಬೇರೆ ರೂಪಗಳಲ್ಲಿ ಬಿತ್ತರವಾಗಿದ್ದನ್ನೂ ಮೊನ್ನೆಯಿಂದ ನೋಡಿ ನೋಡಿ ಸಾಕಾಗಿರುವ ಜನತೆಗೆ ಇದೀಗ ಇದರ ಬೆನ್ನಲ್ಲೇ ಮತ್ತೊಂದು ಶಾಕ್!!
ನೈಟ್ ಕರ್ಫ್ಯೂ ಆಯಿತು ಅನ್ನೋವಷ್ಟರಲ್ಲಿ ಜನತಾ ಕರ್ಫ್ಯೂ.. ಇದಾದ ಕೆಲವೇ ದಿನಕ್ಕೆ ಇದಕ್ಕೆ ಹೆಸರು ಬದಲಾವಣೆ… ಲಾಕ್ ಡೌನ್ ಅಬ್ಬರ.. ಸರ್ಕಾರ ಇನ್ನೂ ಟಫ್ ನಿಯಮಗಳನ್ನು ತರಲಾಗುತ್ತೆ ಅಂದು ಇದೀಗ ನಿಯಮ ನೋಡಿದರೆ ಎಂತಹವರಾದರೂ ಇದಕ್ಕೆ ಏನನ್ನಬೇಕೋ ಎಂದು ಯೋಚಿಸುವಂತಾಗಿದೆ…
ಟಫ್ ರೂಲ್ಸ್ ಇನ್ನೂ ಇದೆ ಅಂದು ಈಗ ನೋಡಿದರೆ ಹಿಂದಿನ ಜನತಾ ಕರ್ಫ್ಯೂಗೂ ಈಗ ಕರೆಯುತ್ತಿರುವ ಲಾಕ್ ಡೌನ್ ಗೂ ಯಾವ ವ್ಯತ್ಯಾಸವೂ ಇಲ್ಲ.. ಇದೊಂಥರಾ ಕಾಮೆಡಿ ಲಾಕ್ ಡೌನ್ ಆಗಿದೆ ಅನ್ನಿಸುತ್ತೆ..
ಅದರಲ್ಲೂ ಹಿಂದಿನಂತೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ತನಕ ಅಂಗಡಿ ಬಾಗಿಲು ತೆರೆಯುವ ಅವಕಾಶವಂತೆ, ರಸ್ತೆಗೆ ವಾಹನಗಳು ಬರೋ ಹಾಗಿಲ್ಲವಂತೆ.. ಅಂಗಡಿ ಓಪನ್ ಅಂದ್ಮೇಲೆ ಜನ ಬರದೇ ಇರೋಕೆ ಸಾಧ್ಯಾನಾ? ವಾಹನ ರಸ್ತೆಗಿಳಿಯದೇ ಇರಲು ಸಾಧ್ಯನಾ? ಅಷ್ಟಕ್ಕೂ ಈ ನಿಯಮ ವಿಚಿತ್ರ?! ಅಂತ ಅನಿಸದೇ ಇರಲು ಸಾಧ್ಯಾನಾ?!….
ಸರ್ಕಾರದ ವಿಭಿನ್ನ ನಡೆ ಹಾಸ್ಯಾಸ್ಪದವಾಗಿ ಕಾಣುವಂತಿದೆ.. ಕೊರೋನಾ ನಿಯಂತ್ರಣ ಕ್ರಮಕ್ಕಾಗಿ ವಿಭಿನ್ನ ರೂಲ್ಸ್ ಅನ್ನೋ ನೆಪ ಮಾತ್ರಾನಾ? ಜನ ಈ ನಿಯಮಗಳನ್ನು ಕೇಳೋಕೆ ಅಂತ ಬಕ ಪಕ್ಷಿಗಳ ರೀತಿ ಗಾಬರಿಯಿಂದ ಕಾದಿದ್ದೇ ಬಂತು.. ರೂಲ್ಸ್ ಮಾತ್ರ ಬದಲಾಗಲೇ ಇಲ್ಲ ಬದಲಿಗೆ ಬದಲಾಗಿದ್ದು ಇವುಗಳ ಶೀರ್ಷಿಕೆಯಷ್ಟೇ, ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ..