ಬೆಳ್ತಂಗಡಿ: ಮತದಾರರ ಪಟ್ಟಿ ಪರಿಷ್ಕರಣೆ ಎಸ್ ಐ ಆರ್ ಕೆಲಸಕ್ಕೆ ತೆರಳಿದ್ದ ಬಿ ಎಲ್ ಒ ಅವರಿಗೆ ಜಾತಿ ನಿಂದನೆ ಮಾಡಿದ ಆರೋಪದಡಿ ಶಿರ್ಲಾಲು ನಿವಾಸಿ ಯಶೋಧ ಆಚಾರಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತದಾರರ ಮಾಹಿತಿಗಾಗಿ ಯಶೋಧ ಆಚಾರಿ ಅವರ ಮನೆಗೆ ತೆರಳಿದಾಗ, “ನೀನು ಅಲ್ಲಿಯೇ ನಿಲ್ಲು. ನಿಮ್ಮ ಜಾತಿಯವರು ಇಲ್ಲಿಗೆ ಬರುವುದಿಲ್ಲ” ಎಂದು ಹೇಳಿ ಮನೆಯ ಒಳಗೆ ಬಿಡದೆ ಮೆಟ್ಟಿಲ ಬಳಿಯೇ ನಿಲ್ಲಿಸಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
BLO ನೀಡಿದ ದೂರಿನ ಮೇರೆಗೆ ಜುಲೈ 7 ರಂದು ಸಂಜೆ ಆರೋಪಿ ಯಶೋಧ ಆಚಾರಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ ತನಿಖೆ ನಡೆಯುತ್ತಿದೆ.
























