ಪುತ್ತೂರು : ಹಿಂದೂ ಜಾಗರಣ ವೇದಿಕೆ ಸವಣೂರು, ಪುತ್ತೂರು ಜಿಲ್ಲೆ ವತಿಯಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಅಖಂಡ ಭಾರತ ಸಂಕಲ್ಪ ದಿನ, ಬೃಹತ್ ಪಂಜಿನ ಮೆರವಣಿಗೆ ಆ.13 ರಂದು ನಡೆಯಲಿದೆ.
ಸಂಜೆ 6 ಗಂಟೆಗೆ ಮಾಂತೂರಿನಿಂದ ಸವಣೂರು ಜಂಕ್ಷನ್ ವರೆಗೆ ಮೆರವಣಿಗೆ ನಡೆಯಲಿದೆ.
ಸಂಜೆ 7 ಗಂಟೆಗೆ ಸವಣೂರು ಯುವಕ ಮಂಡಲದ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರದ ಗೌರವಾಧ್ಯಕ್ಷರಾದ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ರವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಯೋಧ ಬಾಲಕೃಷ್ಣ ಬಸ್ತಿ ರವರು ವಹಿಸಲಿದ್ದಾರೆ.
ಹಿಂದೂ ಜಾಗರಣ ವೇದಿಕೆ ಸವಣೂರು ಘಟಕದ ಗೌರವಾಧ್ಯಕ್ಷರಾದ ಗಿರಿಶಂಕರ ಸುಲಾಯ, ಹಿಂದೂ ಜಾಗರಣ ವೇದಿಕೆ ತಾಲೂಕು ಸಮಿತಿ ಸದಸ್ಯರಾದ ಗಿತೇಶ್ ಮಡಪ್ಪಾಡಿ, ಹಿಂದೂ ಜಾಗರಣ ಸವಣೂರು ಘಟಕದ ಸಂಚಾಲಕರಾದ ಶ್ರೀಧರ ಇಡ್ಯಾಡಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
