ಪುತ್ತೂರು: ಸೌಜನ್ಯಳಿಗೆ ನ್ಯಾಯ ಕೇಳಲು ನಡೆಸುವ ಹೋರಾಟಕ್ಕೆ ಅಪಪ್ರಚಾರದ ಮೂಲಕ ಅಡ್ಡಿ ಪಡಿಸುತ್ತಿದ್ದು, ಈ ಬಗ್ಗೆ ಪುತ್ತಿಲ ಪರಿವಾರ ಖಂಡಿಸಿದೆ.
ಈ ಹೋರಾಟ ಯಾವುದೇ ರಾಜಕೀಯ ಹೋರಾಟವಲ್ಲ ಮತ್ತು ಸರ್ಕಾರದ ವಿರುದ್ದ ನಡೆಯುವ ಹೋರಾಟವೂ ಅಲ್ಲ., ಅಮಾಯಕ ವಿದ್ಯಾರ್ಥಿನಿ ಸೌಜನ್ಯಳಿಗೆ ನ್ಯಾಯ ಕೇಳಲು ನಡೆಸುವ ಹೋರಾಟವಾಗಿದೆ.
ಸರ್ಕಾರ ಬರುತ್ತದೆ ಹೋಗುತ್ತದೆ. ಸಾರ್ವಜನಿಕರು ಕಟ್ಟುವ ತೆರಿಗೆ ಹಣದ ಪ್ರತಿಫಲವಾಗಿ ಸಂಬಳ ತೆಗೆದುಕೊಳ್ಳುವ ಇಲಾಖೆಗಳು ಸಾರ್ವಜನಿಕರು ನ್ಯಾಯಕ್ಕಾಗಿ ಹೋರಾಟಗಳಿಗೆ ವಿರೋಧ ವ್ಯಕ್ತಪಡಿಸಿ ಒಂದು ಪಕ್ಷದ ಜೀತದಾಳುಗಳಂತೆ ವರ್ತಿಸುವುದು ತೀವ್ರ ಖಂಡನೀಯ ಎಂದು ಪುತ್ತಿಲ ಪರಿವಾರ ತಿಳಿಸಿದೆ.
ಆ.14 ರ ಪುತ್ತಿಲ ಪರಿವಾರದ ಹೋರಾಟ ಪೂರ್ವ ನಿಗದಿಯಂತೆ ನಡೆಯುತ್ತದೆ. ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ದರ್ಬೆಯಿಂದ ಹೊರಟು ಬಸ್ ನಿಲ್ದಾಣದವರೆಗೆ ಜಾಥ ನಡೆಯಲಿದೆ. ಎಲ್ಲರಿಗೂ ಸೌಜನ್ಯಳ ನೈಜ ಕೊಲೆಗಡುಕರು ಸಿಗಬೇಕೆಂಬ ಮನಸ್ಸಿನ ಭಾವನೆ ಇದೆ, ಪುತ್ತೂರಿನ ವ್ಯಾಪಾರಸ್ಥರು ಯಾವತ್ತೂ ನ್ಯಾಯದ ಪರವಾಗಿರುವ ಕಾರಣ ಆ ಹೆಣ್ಣುಮಗಳ ಸಾವಿಗೆ ನ್ಯಾಯ ಸಿಗಲು ತಮ್ಮ ವ್ಯವಹಾರ ಸ್ಥಗಿತಗೊಳಿಸಿ ಈ ಅನ್ಯಾಯದ ವಿರುದ್ದ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಪುತ್ತಿಲ ಪರಿವಾರ ತಿಳಿಸಿದೆ..