ಬೆಳ್ತಂಗಡಿ: ಕಿತ್ತು ಹೋಗುತ್ತಿರುವ ಡಾಂಬರು, ಬೃಹತ್ ಹಾಗೂ ತಗ್ಗು ಗುಂಡಿಗಳ ದರ್ಬಾರು, ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷತೆ, ಅಧಿಕಾರಿಗಳ ನಿರಾಸಕ್ತಿ, ಜನಪ್ರತಿನಿಧಿಗಳ ನಿಷ್ಕಾಳಜಿ ಸೇರಿ ವಿವಿಧ ಕಾರಣಗಳಿಂದಾಗಿ ಸಾವಿರಾರು ಪ್ರಯಾಣಿಕರು ಸಂಕಟದಿoದಲೇ ಸಂಚರಿಸುವoತಹ ಪರಿಸ್ಥಿತಿ ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣವಾಗಿದೆ.
ಕಳೆದ ಮೂರು ವರ್ಷದಿಂದ ಈ ರಸ್ತೆಯ ಅಭಿವೃದ್ಧಿಗೆ ಹಿಡಿದ ಗ್ರಹಣಕ್ಕೆ ಮೋಕ್ಷ ಇದುವರೆಗೂ ಪ್ರಾಪ್ತಿಯಾಗಿಲ್ಲ. ಮಳೆಗಾಲ, ಚಳಿಗಾಲ, ಬೇಸಿಗಾಲದಲ್ಲಿ ಸದಾ ಸಂಕಟ ಅನುಭವಿಸುತ್ತಿರುವ ಪ್ರಯಾಣಿಕರ ಪಾಡು ಹೇಳತೀರದು. ಈ ರಸ್ತೆಗೆ ಬೇಸಿಗೆಯಲ್ಲಿ ಹಾಕಿದ್ದ ಪ್ಯಾಚ್ ವರ್ಕ್ ಮುಂಗಾರು ಆಗಮನದ ಮಳೆಯ ಅಬ್ಬರಕ್ಕೆ ಡಾಂಬರು ಡಮಾರ್ ಆಗಿ ಗುಂಡಿಗಳು ಸೃಷ್ಟಿಯಾಗಿದೆ. ಮಳೆ ನೀರು ರಸ್ತೆಯಲ್ಲೇ ಸಾಗುತ್ತಿದೆ. ಚರಂಡಿಗಳು ದುರಸ್ತಿ ಇದುವರೆಗೂ ನಡೆಯದೇ ಇದ್ದು ಸವಾರರಿಗೆ ಕೆಸರಿನ ಸ್ನಾನವಾಗುತ್ತಿದೆ.
ಕುಪ್ಪೆಟ್ಟಿಯಿಂದ ಉಪ್ಪಿನಂಡಿಯವರೆಗೆ 9 ಕಿ.ಮೀ. ರಸ್ತೆಯ ದುರಸ್ತಿಯಾಗದೇ ಉಳಿದು ಬಿದ್ದಿದ್ದರೂ ಮಳೆಗಾಲದ ಮುಂಚೆ ರಸ್ತೆಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಮರೆತೆ ಬಿಟ್ಟಿದೆ. ನೇಜಿಕಾರು, ಪೆದಮಲೆ ಸಮೀಪದಲ್ಲಿ ಬೃಹತ್ ಹೊಂಡಗಳು ತಲೆಎತ್ತಿವೆ. ಗುಂಡಿಯೊoದು ಸೃಷ್ಟಿಯಾಗಿ ಅನುಹಾತಕ್ಕೆ ಆಹ್ವಾನ ನೀಡುತ್ತಿದೆ. ಒಂದ ಕಡೆಯ ವಾಹನಗಳು ಸಾಲಗಿ ನಿಂತು ಮತ್ತೊಂದು ಕಡೆಯ ವಾಹನಗಳು ಹೋದ ಮೇಲೆ ಸಂಚಾರಿಸುವ ಪರಿಸ್ಥಿತಿ ಇಲ್ಲಿನದು. ಈ ಹೊಂಡದಲ್ಲಿ ದ್ವಿಚಕ್ರ ವಾಹನ ಅರ್ಧದಷ್ಟು ಮುಳುಗಿ ಹೇಳುತ್ತದೆ. ರಾತ್ರಿ ವೇಳೆ ನೀರು ನಿಂತು ಗುಂಡಿವಿರುವುದು ಗೋಚರಿಸದೇ ಇದ್ದಲ್ಲಿ ಬಿದ್ದು ಏಟು ಮಾಡಿಕೊಳ್ಳವುದು ಕಟ್ಟಿಟ್ಟ ಬುತ್ತಿಯಾಗಿದೆ.
ನೇಜಿಕಾರು ಬಸ್ ನಿಲ್ದಾಣ ಬಳಿ ರಸ್ತೆ ಬದಿ ಕುಸಿಯುವ ಹಂತದಲ್ಲಿದೆ. ಮಳೆ ನೀರು ರಸ್ತೆಯ ಉದ್ದಕ್ಕೂ ಹರಿಯುತ್ತಿದೆ. ಚರಂಡಿಗಳಲ್ಲಿ ತುಂಬಿರುವ ಹೂಳುಗಳನ್ನು ಬಿಡಿಸಿಲ್ಲ, ಅಲ್ಲಲ್ಲಿ ರಸ್ತೆ ಮಧ್ಯೆ ನೀರು ನಿಂತು ಸವಾರರಿಗೆ ಕೆಸರ ಸಿಂಚನವಾಗುತ್ತಿದೆ. ಕರಾಯ, ಕಲ್ಲೇರಿ, ಶಿವಗಿರಿ ಬಳಿ ತಗ್ಗು ಗುಂಡಿಗಳು ನಿರ್ಮಾಣವಾದರೆ ಕುಪ್ಟೆಟ್ಟಿ ಸೇತುವೆಯಲ್ಲಿಯೇ ಮಳೆ ನೀರು ನಿಲ್ಲುತ್ತಿದೆ.
ರಸ್ತೆಯ ಅವ್ಯವಸ್ಥೆಯ ವಿರುದ್ಧ ಈ ಹಿಂದೆ ತೆಂಗು, ಬಾಳೆ ನಾಟಿ ಮಾಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾಧ್ಯಮಗಳ ವರದಿ ಬೆನ್ನಲೇ ಇಲಾಖೆ ಜಲ್ಲಿಕಲ್ಲಿನ ಡೆಸ್ಟ್ ಹಾಕಿ ತಾತ್ಕಲಿಕ ವ್ಯವಸ್ಥೆ ಮಾಡುತ್ತಿತ್ತು. ರಸ್ತೆ ದುಸ್ಥಿಗೆ ಬೆಸತ್ತು ಉಜಿರೆ ಕಡೆಗೆ ಹೋಗುವ ಜನರು ಇಳಂತಿಲ, ಬೆಳಾಲು ಮಾರ್ಗವಾಗಿ ತೆರಳುತ್ತಿದ್ದಾರೆ.


























