ಪುತ್ತೂರು: ಶ್ರೀ ದೇವತಾ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ವರ್ಷಂಪ್ರತಿ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿರುವ 69ನೇ ವರ್ಷದ ಸಾರ್ವಜನಿಕ ಮಹಾಗಣೇಶೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೇವಾ ರೂಪದಲ್ಲಿ ನೀಡಲು ಅವಕಾಶ ಇಚ್ಚಿಸುವ ಪ್ರತಿಭಾನ್ವಿತರು ಮತ್ತು ಕಲಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 20ರವರೆಗೆ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಸೇವಾ ರೂಪದ ಕಾರ್ಯಕ್ರಮ ನೀಡಲು ಅವಕಾಶವಿದ್ದು ಸಂಘ ಸಂಸ್ಥೆಗಳು ಅಥವಾ ವೈಯಕ್ತಿಕ ವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಸಂದರ್ಭದಲ್ಲಿ ಕಾರ್ಯಕ್ರಮ ನೀಡುವ ತಂಡ ಅಥವಾ ವ್ಯಕ್ತಿಗಳಿಗೆ ಕಾರ್ಯಕ್ರಮಗಳಿಗೆ ಅಗತ್ಯವಾದ ವೇದಿಕೆ, ಧ್ವನಿ ಮತ್ತು ಬೆಳಕು ಒದಗಿಸಲಾಗುವುದು ಯಾವುದೇ ಗೌರವಧನ ನೀಡಲಾಗುವುದಿಲ್ಲ.
ಅರ್ಜಿಗಳನ್ನು ಅಧ್ಯಕ್ಷರು ಕಿಲ್ಲೆಮೈದಾನ ದೇವತಾ ಸಮಿತಿ (ರಿ), ಸುಧಾಕರ ಶೆಟ್ಟಿ ನಿವಾಸ, ನೆಲ್ಲಿಕಟ್ಟೆ, ಪುತ್ತೂರು. ಈ ವಿಳಾಸಕ್ಕೆ ಕಳುಹಿಸಿ ಕೊಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಭಿಜಿತ್ ಶೆಟ್ಟಿನೆಲ್ಲಿಕಟ್ಟೆ, ಅಧ್ಯಕ್ಷರು, ಕಿಲ್ಲೆಮೈದಾನ ದೇವತಾ ಸಮಿತಿ(ರಿ) 9448121851, ಗಣೇಶ್ ಶೆಟ್ಟಿ,ನೆಲ್ಲಿಕಟ್ಟೆ 9448124473 ಡಾ. ರಾಜೇಶ್ ಬೆಜ್ಜಂಗಳ 9448732414 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


























