ಪುತ್ತೂರು : ಬೈಕ್ ಅಪಘಾತಗೊಂಡು ಗಾಯಗೊಂಡಿದ್ದ ಯುವಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾನವೀಯತೆ ಮೆರೆದಿದ್ದಾರೆ.
ಪುತ್ತೂರಿನ ದರ್ಬೆಯ ಫಿಲೋಮಿನಾ ಕಾಲೇಜಿನ ಎದುರು ಬೈಕ್ ಅಪಘಾತಗೊಂಡು ಬೆಳಿಯೂರುಕಟ್ಟೆಯ ರಮೀಝ್ ಎನ್ನುವವರು ಗಾಯಗೊಂಡಿದ್ದರು.

ಅದೇ ರಸ್ತೆಯಲ್ಲಿ ಬರುತಿದ್ದ ಅರುಣ್ ಕುಮಾರ್ ಪುತ್ತಿಲ ತಕ್ಷಣ ತನ್ನ ಕಾರಿನಲ್ಲಿ ಗಾಯಾಳುವನ್ನು ಕೂರಿಸಿಕೊಂಡು ದರ್ಬೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರು.
ಅಪಘಾತದಲ್ಲಿ ರಮೀಝ್ ಅವರ ಕಾಲಿಗೆ ಬಲವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.