ಪುತ್ತೂರು: ಪುತ್ತೂರು ಗಾಂಧಿಕಟ್ಟೆಯ ಬಳಿಯ ಎಕ್ಸಿಸ್ ಎಟಿಎಮ್ ನ ಕಸದ ಬುಟ್ಟಿಯಲ್ಲಿ ಕಾಣಿಸಿದ ಬೆಂಕಿಯನ್ನು ಕೋವಿಡ್ -19 ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿ ಪಾಲನೆ ಮಾಡುವ ಕುರಿತು ಪರಿಶೀಲನಾ ಕರ್ತವ್ಯದಲ್ಲಿದ್ದ ನಗರಸಭಾ ಅಧಿಕಾರಿಗಳು ತಮ್ಮ ಸಮಯಪ್ರಜ್ಞೆಯಿಂದ ಬೆಂಕಿ ನಂದಿಸುವ ಮೂಲಕ ಅನಾಹುತವನ್ನು ತಪ್ಪಿಸಿದ್ದಾರೆ.
ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಮತ್ತು ಅವರ ತಂಡದ ಸ್ಯಾನಿಟರಿ ಸೂಪರ್ ವೈಸರ್ ಅಮಿತ್ , ವೇಣುಗೋಪಾಲ್ ಕರ್ತವ್ಯದಲ್ಲಿರುವ ಸಮಯ ಆ್ಯಕ್ಸಿಸ್ ಎಟಿಎಮ್ ಒಳಗಿನಿಂದ ಹೊಗೆ ಕಾಣಿಸಿಕೊಂಡಿದೆ. ಅದೇ ದಾರಿಯಲ್ಲಿದ್ದ ಕಾರ್ಯನಿರತ ಅಧಿಕಾರಿಗಳು ಅಲ್ಲಿ ಹೋಗಿ ನೋಡಿದಾಗ ಎಟಿಎಮ್ ಒಳಗಿದ್ದ ಕಸದ ಬುಟ್ಟಿಗೆ ಯಾರೋ ಭಿಕ್ಷುಕರು ಬೀಡಿ ಸೇದಿ ಕಸದ ಬುಟ್ಟಿಗೆ
ಹಾಕಿರುವುದು ಗಮನಕ್ಕೆ ಬಂದಿದ್ದು ಅಧಿಕಾರಿಗಳು ತಕ್ಷಣ ಪಕ್ಕದ ದಿನೇಶ್ ಭವನ ಹೊಟೇಲ್ ಒಪನ್ ಮಾಡಿಸಿ ಅಲ್ಲಿಂದ ನೀರು ತಂದು ಬೆಂಕಿಯನ್ನು ನಂದಿಸಿದ್ದಾರೆ. ನಾಲ್ಕು ದಿನದ ಹಿಂದೆ ಅಶಕ್ತ ಮಹಿಳೆಯನ್ನು ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ನಗರಸಭಾ ಅಧಿಕಾರಿಗಳು ಈ ಬಾರಿ ತಮ್ಮ ಸಮಯಪ್ರಜ್ಞೆಯಿಂದ ಬೆಂಕಿಗಾಹುತಿ ಆಗುವ ಸಾಧ್ಯತೆ ಇದ್ದ ಎಟಿಎಂ ಅನ್ನು
ಸಂರಕ್ಷಿಸಿದ್ದಾರೆ.