ಪುತ್ತೂರು: ಉಪ್ಪಿನಂಗಡಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾನಂದ ದಾಸರಮೂಲೆ (58ವ)ರವರು ಅಲ್ಪಕಾಲದ
ಅಸೌಖ್ಯದಿಂದಾಗಿ ಮೇ 8ರಂದು ಸ್ವಗೃಹದಲ್ಲಿ ನಿಧನರಾದರು.
ಹಿರೇಬಂಡಾಡಿಯ ದಾಸರಮೂಲೆ ನಿವಾಸಿಯಾದ ಇವರು, ಯುವವಾಹಿನಿ ಘಟಕ, ಬಿಲ್ಲವ ಸಂಘ ಸಹಿತ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿದ್ದ ಇವರು ಆತ್ಮಶಕ್ತಿ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಮೃತರು ಪತ್ನಿ ಚಂದ್ರಕಲಾ, ಪುತ್ರ ತೇಜಸ್ ಸೂರ್ಯ, ಪುತ್ರಿ ಮನೀಕ್ಷಾರವರನ್ನು ಅಗಲಿದ್ದಾರೆ.
ಶಾಸಕ ಸಂಜೀವ ಮಠಂದೂರು ಸಹಿತ ಹಲವರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.