ವಿಟ್ಲ : ಪ್ರಶಸ್ತಿ ವಿಜೇತ ಯುವಕ ಮಂಡಲ ವಿಟ್ಲ ಇದರ 46ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವನ್ನು ವಿಟ್ಲದ ಉದ್ಯಮಿ ಎ ಕೃಷ್ಣ ಉದ್ಘಾಟಿಸಿದರು.

ವಿಟ್ಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಕುಮಾರಿ, ಯುವಕ ಮಂಡಲದ ಅಧ್ಯಕ್ಷ ವಸಂತ ಶೆಟ್ಟಿ, ಗೌರವಾಧ್ಯಕ್ಷ ರಮೇಶ್ ಬಿ ಎಸ್, ಕಾರ್ಯದರ್ಶಿ ಜನಾರ್ಧನ ಪದ್ಮಶಾಲಿ, ಕೋಶಾಧಿಕಾರಿ ಗಂಗಾಧರ, ಲೋಕರಾಜ್, ಸುದರ್ಶನ ಪಡಿಯಾರ್, ಸುಧೀರ್, ಕೃಷ್ಣ ವೇಷಧಾರಿ ಮಕ್ಕಳು ಉಪಸ್ಥಿತರಿದ್ದರು.

























