ಪುತ್ತೂರು : ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯು ಶ್ರೀದೇವಿ ವಿದ್ಯಾ ಸಂಸ್ಥೆ ಪುಣಚದಲ್ಲಿ ನಡೆಯಿತು. ಈ ಸ್ಪರ್ದೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ (17ರ ವಯೋಮಾನದ) – ಪ್ರಮಥ.ಎಂ.ಭಟ್, 10ನೇ ತರಗತಿ ( ರವಿನಾರಾಯಣ.ಎಂ ಮತ್ತು ಶರಾವತಿ ದಂಪತಿ ಪುತ್ರ) -ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ:(14ರ ವಯೋಮಾನದ) ಅಭಿಜ್ಞಾ ಶಾಂಭವಿ, 6ನೇ ತರಗತಿ ( ಸುಧೀರ್ ಮತ್ತು ಲತಾ ದಂಪತಿ ಪುತ್ರಿ) – ಪ್ರಥಮ ಸ್ಥಾನ, ಮಹತಿ, 6ನೇ ತರಗತಿ ( ಶಿವರಂಜನ್.ಎಂ ಮತ್ತು ಲಾವಣ್ಯ ಭಟ್ ದಂಪತಿ ಪುತ್ರಿ)-ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವರ್ಷಿ.ರೈ, 7ನೇ ತರಗತಿ ( ಶಶಿಧರ ರೈ ಮತ್ತು ರವಿಕಲಾ ರೈ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಪಡೆದಿರುತ್ತಾಳೆ.
14ರ ವಯೋಮಾನದ ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ನಮ್ಮ ಶಾಲಾ ಬಾಲಕಿಯರ ತಂಡ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ ಹಾಗೂ ಪ್ರಥಮ ಸ್ಥಾನ ಪಡೆದ 3 ವಿದ್ಯಾರ್ಥಿಗಳು ಮಧ್ಯಪ್ರದೇಶದ ದೇವಾಸ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























