ಮಂಗಳೂರು : ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಣ್ಣೀರುಬಾವಿ ಬೀಚ್ ಬಳಿ ನಿನ್ನೆ ರಾತ್ರಿ ನಡೆದಿದೆ.

ಗಾಯಗೊಂಡವರನ್ನು ಬೆಂಗರೆ ನಿವಾಸಿ ನಝೀರ್ ಎಂಬವರ ಮಗ ಮೊಯ್ದಿನ್ ನಾಝಿಮ್ ಮತ್ತು ಅವರ ಸ್ನೇಹಿತ ಸಾಲೆತ್ತೂರು ನಿವಾಸಿ ಅನಸ್ ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡಿರುವ ಇವರಿಬ್ಬರನ್ನು ನಗರದ ಎರಡು ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ವೇಳೆ ನಾಝಿಮ್ ಸಾಲೆತ್ತೂರಿಗೆ ತೆರಳುವ ಸ್ನೇಹಿತ ಅನಸ್‌ರನ್ನು ತನ್ನ ಬೈಕ್ನಲ್ಲಿ ಕುಳ್ಳಿರಿಸಿಕೊಂಡು ಕೂಳೂರು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ ನಡೆಸಿ ಪರಾರಿಯಾಗಿರುವ ವಾಹನದ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.


























