ಪುತ್ತೂರು : ಗೋಡೌನ್ ಬೀಗ ಮುರಿದು 2 ಕ್ವಿಂಟಾಲ್ 90 ಕೆಜಿ ಅಡಿಕೆ ಕಳವುಗೈದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಣಾಜೆ ನಿವಾಸಿ ಅಬ್ದುಲ್ ಬುರುಹಾನ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಅಬ್ದುಲ್ ಬುರುಹಾನ್ ಗೋಡೌನ್ ನಲ್ಲಿ ಸುಲಿದ ಅಡಿಕೆಯನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದು, ನ.22 ರಂದು ರಾತ್ರಿ ಗೋಡೌನ್ ಬಾಗಿಲು ಹಾಕಿ ಹೋಗಿ ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಗೋಡೌನಿಗೆ ಹಾಕಿದ್ದ ಲಾಕ್ ಯಾರೋ ಮುರಿದಿದ್ದು, ಸೆಟರ್ ನ್ನು ತೆಗೆದಿದ್ದು, ಒಳ ಪ್ರವೇಶಿಸಿ ನೋಡಿದಾಗ ಯಾರೋ ಕಳ್ಳರು ಸುಮಾರು 90 ಸಾವಿರ ಮೌಲ್ಯದ 02 ಕ್ವಿಂಟಾಲ್ 90 ಕೆಜಿ ಅಡಿಕೆಯನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 113-2023 ಕಲಂ:454,457, 380 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
























