ಪುತ್ತೂರು-ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆಯಿಂದ ಪಾಪೆತ್ತಡ್ಕ ತನಕ ಸುಮಾರು 2.75 ಕೋಟಿ ರೂ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಯ ಗುದ್ದಲಿಪೂಜೆಯನ್ನು ಶಾಸಕರಾದ ಅಶೋಕ್ ಕುಮಾರ್ ರೈ ಅವರು ನೆರವೇರಿಸಿದರು.
![](https://zoomintv.online/wp-content/uploads/2023/12/IMG-20231201-WA0036-1024x461.jpg)
ಈ ವೇಳೆ ಮಾತನಾಡಿದ ಶಾಸಕರು, ಪುರುಷರಕಟ್ಟೆಯಿಂದ ಪಾಪೆತ್ತಡ್ಕದವರೆಗಿನ ರಸ್ತೆ ಸುಮಾರು 2 ಕೋಟಿ 75 ಲಕ್ಷದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಶಿಲಾನ್ಯಾಸ ನೆರವೇರಿಸಲಾಗಿದೆ. ಶೀಘ್ರವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ.
![](https://zoomintv.online/wp-content/uploads/2023/12/IMG-20231201-WA0035-1024x461.jpg)
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಹಂತ-ಹಂತವಾಗಿ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಪುತ್ತೂರು-ಉಪ್ಪಿನಂಗಡಿ ರಸ್ತೆ, ವಿಟ್ಲ-ಸಾರಡ್ಕ ರಸ್ತೆ ಹಾಗೂ ಪುರುಷರಕಟ್ಟೆ ಪಾಪೆತ್ತಡ್ಕ ರಸ್ತೆ ಈ ಮೂರು ಕಾಮಗಾರಿಗಳು ನಡೆಯಲಿದೆ.
![](https://zoomintv.online/wp-content/uploads/2023/12/IMG-20231201-WA0033-1024x461.jpg)
ಇನ್ನು 20 ಕೋಟಿ ಅನುದಾನಕ್ಕಾಗಿ ಈಗಾಗಲೇ ಕಳುಹಿಸಿಕೊಟ್ಟಿದ್ದೇವೆ. ಅದರಲ್ಲಿ ಉಪ್ಪಿನಂಗಡಿಗೆ ತೆರಳುವ ಬೊಳುವಾರು-ಪಡೀಲ್ ರಸ್ತೆ ಕಾಂಕ್ರೀಟಿಕರಣ, ನೆಕ್ಕಿಲಾಡಿಯಿಂದ ಉಪ್ಪಿನಂಗಡಿಗೆ ತೆರಳುವ ಕಾಂಕ್ರೀಟಿಕರಣ, ಕೌಡಿಚ್ಚಾರು-ಇಳಂತಾಜೆ ತೆರಳುವ ಕೂಡ ಅನುದಾನದ ಪ್ರಸ್ತಾವನೆಯಲ್ಲಿದೆ ಎಂದರು.
ಬಿಜೆಪಿ ಪಕ್ಷದವರು ಹೇಳುತ್ತಿದ್ದಾರೆ ಅನುದಾನ ಬರುತ್ತಿಲ್ಲ ಎಂದು ಆದ್ರೆ ಅನುದಾನ ಬರ್ತಿದೆ., ಕಾಮಗಾರಿ ನಡೆಯುತ್ತಿದೆ. ಎಲ್ಲಿ ಎಲ್ಲಾ ಕಾಮಗಾರಿ ನಡೆಯುತ್ತದೆಯೋ ಅಲ್ಲಿ ಎಲ್ಲಾ ಶಿಲಾನ್ಯಾಸ ನೆರವೇರಿಸಿ ಜನತೆಯ ಗಮನಕ್ಕೆ ತರಬೇಕು. ಕಾಮಗಾರಿ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕರ ಗಮನಕ್ಕೂ ಬರಬೇಕು ಎಂದು ಹೇಳಿದರು.