ವಿಜಯಪುರ : ರಾಜ್ಯದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಸೌಂಡ್ ಮಾಡಿದೆ. ಮನೆಗಳ್ಳತನ ಮಾಡುವ ಅಂತಾರಾಜ್ಯ ಚಡ್ಡಿ ಗ್ಯಾಂಗ್ ವಿಜಯಪುರ ನಗರದಲ್ಲಿ ಕಾಣಿಸಿಕೊಂಡಿದೆ.
ಗುಮ್ಮಟ ನಗರದ ಮನೆಯೊಂದಕ್ಕೆ ಚಡ್ಡಿ ಗ್ಯಾಂಗ್ ಎಂಟ್ರಿ ಕೊಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ಕಂಡು ಊರವರು ಬೆಚ್ಚಿಬಿದ್ದಿದ್ದಾರೆ.
ಮಂಕಿ ಕ್ಯಾಪ್, ಬನಿಯನ್ ತೊಟ್ಟು ತಡರಾತ್ರಿ ಮನೆಗಳ್ಳತನ ಮಾಡುವ ಐದಾರು ಜನರು ಕಾಣಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದಲೂ ಚಡ್ಡಿ ಗ್ಯಾಂಗ್ ಬಗ್ಗೆ ಅನೌನ್ಸ್ ಮೆಂಟ್ ಮಾಡಿದ್ದು, ಬಡಾವಣೆಗಳಲ್ಲಿ ಚಡ್ಡಿ ಗ್ಯಾಂಗ್ ಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

























