ಬಂಟ್ವಾಳ : ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಪಿಕ್‌ಪಾಕೆಟ್ ಪ್ರಕರಣಗಳು ಮುಂದುವರಿದಿದ್ದು, ಮಹಿಳೆಯೋರ್ವರ ಬ್ಯಾಗ್‌ನಿಂದ ಸುಮಾರು 4 ಸಾವಿರ ರೂ. ಲಪಟಾಯಿಸಿದ ಘಟನೆ ನಡೆದಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೋಳಿಯಾರು ನಿವಾಸಿ ಪ್ರೇಮ ಹಣ ಕಳೆದುಕೊಂಡ ಮಹಿಳೆ.
ಪ್ರೇಮ ಊರಿನಿಂದ ಬಂದು ಬಿ.ಸಿ.ರೋಡಿನಲ್ಲಿ ಮಗುವಿನೊಂದಿಗೆ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗೆ ಹತ್ತುವ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ಬಸ್ ನಿಲ್ದಾಣದಲ್ಲಿ ಪಿಕ್ ಪಾಕೆಟ್ ದಂಧೆ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಒಂದೇ ದಿನ ಯುವತಿಯರಿಬ್ಬರ ಮೊಬೈಲ್ ಕದ್ದ ಘಟನೆ ನಡೆದಿತ್ತು.



























