ಪುತ್ತೂರು:ಕರ್ನಾಟಕ ಮರಾಠ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪುತ್ತೂರು ಕೋರ್ಟ್ ರಸ್ತೆಯ ಆಶೀರ್ವಾದ್ ಜ್ಯುವೆಲ್ಲರ್ಸ್ ಮಾಲಕ ಮಾಧವ್ ಶೇಟ್ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಸುಶಾಂತ್ ದುಬಲ್ , ಕಾರ್ಯದರ್ಶಿಯಾಗಿ ಸಂಜಯ್ ಗೈಕ್ವಾಡ್ಕಾಜಂಜಿಯಾಗಿ ಸುರೇಶ್ ಯಾದವ್ ಹಾಗೂ ಕ್ರೀಡಾ ಮಂತ್ರಿ ಯಾಗಿ ಅವಿನಾಶ್ ರಾಜೆಪವರ್ ಆಯ್ಕೆ ಗೊಂಡರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮರಾಠ ಅಸೋಸಿಯೇಶನ್ ನ ಅಧ್ಯಕ್ಷರು ಪಿತಾಂಬರ್ ಗೋರೆ, ಪುತ್ತೂರಿನ ಮರಾಠ ಅಶೋಸಿಯೇಶನ್ ನ ಅಧ್ಯಕ್ಷರು ಗೋರಕ್ ಖಂದಾರೆ, ಬಳ್ಳಾರಿ ನ ಪ್ರತಿನಿಧಿಯಾಗಿ ಸತೀಶ್ ಶೇಟ್, ದಾವಣಗೆರೆ ಯ ಪ್ರತಿನಿಧಿಯಾಗಿ ಸಂಜಯ್ ಗಾಯಕ್ವಾಡ್ ಮತ್ತು ಸಾಗರ್ ಘಾರ್ಗೆ, ಹುಬ್ಬಳ್ಳಿಯ ಪ್ರತಿನಿಧಿಯಾಗಿ ಉಮೇಶ್ ಯಾದವ್, ಬಂಟ್ವಾಳ ದ ಪ್ರತಿನಿಧಿಯಾಗಿ ಅವಿನಾಶ್ ರಾಜೇ ಪವಾರ್ ಮತ್ತು ಪ್ರಸಾದ್ ಮೂಡುಬಿದಿರೆ, ಮಡಿಕೇರಿಯ ಪ್ರತಿನಿಧಿಯಾಗಿ ಅಧಿಕ್ ಕದಮ್, ಪಾಣೆಮಂಗಳೂರಿನಿಂದ ರವಿ ಶೇಟ್, ಉಡುಪಿಯ ಪ್ರತಿನಿಧಿಯಾಗಿ ಸುಶಾಂತ್ ಡುಬಾಳ್, ಪ್ರಕಾಶ್ ಶಿಂದೆ, ಸಂದೀಪ್ ಪಾಟೀಲ್, ಮಂಗಳೂರಿನ ಪ್ರತಿನಿಧಿಯಾಗಿ ಸುರೇಶ್ ಯಾದವ್ ಮತ್ತು ಅಮಿತ್ ಸಾವಂತ್, ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.