ಪುತ್ತೂರು : ಕೋವಿಡ್ -19 ನಿಯಂತ್ರಣಕ್ಕಾಗಿ ಸರ್ಕಾರ ನಿಯಂತ್ರಣ ಮಾಡಲು ಲಾಕ್ ಡೌನ್ ಘೋಷಿಸಿರುವ ಕಾರಣ ಬಡ ಕುಟುಂಬಗಳು ಕೆಲಸವಿಲ್ಲದೇ ನಿತ್ಯದ ಆಹಾರ ಸಾಮಾಗ್ರಿ ಖರೀದಿಸಲು ಕಷ್ಟಕರವಾಗಿದ್ದು, ಇದನ್ನು ಮನಗಂಡ ಉದ್ಯಮಿ ರೈ ಎಸ್ಟೇಟ್, ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರು, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಕಬಕ ಗ್ರಾಮದ ಪೆರಿಯೋತ್ತಡಿ ಕಾಲೋನಿಯ ನಿವಾಸಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿದರು.
ಅಲ್ಲದೆ ಕೊರೊನಾದ ಬಗ್ಗೆ ಜಾಗ್ರತೆ ವಹಿಸಲು ಜನರಿಗೆ ಮಾಹಿತಿ ನೀಡಿದರು. ಸದಾ ಜನ ಸೇವೆ ಮಾಡುವ ಉದ್ಯಮಿ, ರೈ ಎಸ್ಟೇಟ್ ಮಾಲಕರಾದಂತಹ ಅಶೋಕ್ ರೈ ಕೋಡಿಂಬಾಡಿಯವರು ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.