ಪುತ್ತೂರು: ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಬಲ್ಯ ಗ್ರಾಮದ ಸಂಪಡ್ಕದ ತುಕ್ರಪ್ಪ ಎಂಬವರ ಮನೆಗೆ ಮೇ.25 ರಂದು ಖುದ್ಧು ಭೇಟಿ ನೀಡಿದ ಡಾ. ರಘುರವರು ಉಚಿತ ಚಿಕಿತ್ಸೆ ನೀಡಿದರು.
ಕೋವಿಡ್ -೧೯ ನಿಯಮಾವಳಿಗಳಿಂದಾಗಿ ಯಾವುದೇ ವಾಹನ ಸೌಲಭ್ಯವಿಲ್ಲದಿದ್ದಾಗ ಡಾ. ರಘುರವರನ್ನು ಸಂಪರ್ಕಿಸಿದರು, ಕರೆಗೆ ತಕ್ಷಣ ಸ್ಪಂದಿಸಿದ ಅವರು ಸ್ವತಃ ಮನೆಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆ ನೀಡಿದರು.