ಪುತ್ತೂರು: ಮೂಡಂಬೈಲು ಟ್ರಸ್ಟ್ ವತಿಯಿಂದ
ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಹಾಗೂ ವೈದ್ಯಕೀಯ ಉಪಕರಣಗಳ ನೇಸರಕಂಪ ನಿವಾಸದಲ್ಲಿ ಮೇ.25ರಂದು ವಿತರಿಸಲಾಯಿತು.
ಈ ಸಮಾಜಮುಖಿ ಕಾರ್ಯಕ್ರಮವನ್ನು ರವಿ ಶೆಟ್ಟಿ ಯವರ ಮಾತೃಶ್ರೀ ಶ್ರೀಮತಿ ಸರೋಜಿನಿ ಶೆಟ್ಟಿ ಯವರು ಶಾಸಕರಾದ ಸಂಜೀವ ಮಠಂದೂರು ರವರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು. ಶಾಸಕರಾದ ಸಂಜೀವ ಮಠಂದೂರು ವಿತರಿಸಿದರು.
ಕಳೆದ ಸುಮಾರು ವರ್ಷಗಳಿಂದ ಅನೇಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಮಾಜ ಸೇವೆಗೋಸ್ಕರ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಡಾ. ರವಿ ಶೆಟ್ಟಿ ನೇಸರ ಕಂಪ ಇವರ ಸಾರಥ್ಯದ ನೇಸರ ಫೌಂಡೇಶನ್ ಕೊರೊನಾದ ಸಂದರ್ಭದಲ್ಲಿ ವಿನೂತನ ಕಾರ್ಯವನ್ನು ಕೈಗೊಂಡಿದೆ. ಈ ಸಾಂಕ್ರಾಮಿಕ ರೋಗದ ಸಂದಿಗ್ಧತೆಯಲ್ಲಿ ಈ ರೋಗ ನಿರ್ಮೂಲನೆ ಆಗಬೇಕೆಂಬ ಸಂಕಲ್ಪದ ಜೊತೆಗೆ ಸರ್ಕಾರದ ಸೂಚನೆಯನ್ನು ಪಾಲಿಸುತ್ತಾ ದಿನದ 24 ಗಂಟೆಯೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ನೈತಿಕ ಸ್ಥೈರ್ಯ ತುಂಬುವಂತದ್ದು ನಮ್ಮ ಕರ್ತವ್ಯವೆಂಬಂತೆ ರವಿ ಶೆಟ್ಟಿಯವರ ಪತ್ನಿ ಜ್ಯೋತಿರವರ ಹುಟ್ಟುಹಬ್ಬವನ್ನು ಆಶಾ ಕಾರ್ಯಕರ್ತೆಯರಿಗೆ ಆರ್ಥಿಕವಾಗಿ ಸಹಕಾರ ನೀಡುವುದರ ಮೂಲಕ ಹಾಗೂ ತಮ್ಮನ ಮಗ ಶಾರ್ವಿಕ್ ಹುಟ್ಟುಹಬ್ಬವನ್ನು ಅವಶ್ಯಕ ಮೆಡಿಕಲ್ ಪರಿಕರವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುವುದರ ಮೂಲಕ ನೆರವೇರಿಸಿದರು.
ರವಿ ಶೆಟ್ಟಿಯವರು ಕಳೆದ ಬಾರಿ ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ಮಾನವೀಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿಯೂ ಶಾಸಕರ ಮೂಲಕ ಮುಖ್ಯ ಮಂತ್ರಿ ಕೋವಿಡ್ ಪರಿಹಾರ ನಿಧಿಗೆ 5 ಲಕ್ಷ ರೂ. ಯನ್ನು ನೀಡಿದ್ದು, ಕಷ್ಟದಲ್ಲಿದ್ದ ಸುಮಾರು 500 ಕುಟುಂಬಕ್ಕೆ ದಿನಸಿ ಸಾಮಾಗ್ರಿ ಕಿಟ್ ಗಳನ್ನು ನೀಡಿರುತ್ತಾರೆ. ಅದೇ ರೀತಿ ತಮ್ಮ ಹುಟ್ಟೂರಾದ ಪುಣಚ ಗ್ರಾಮದ ಆಶಾ ಕಾರ್ಯಕರ್ತೆಯರಿಗೂ ಹಾಗೂ ತರವಾಡು ಮನೆ ಗುರುಪುರದ ಆಶಾ ಕಾರ್ಯಕರ್ತೆಯರಿಗೂ ಇದೇ ರೀತಿ ಪ್ರೋತ್ಸಾಹ ಧನವನ್ನು ನೀಡಿದ್ದಾರೆ.
ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್,ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶ ಜಯರಾಮ ಚೌಟ , ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಉದ್ಯಮಿ ಸುಧೀರ್ ಶೆಟ್ಟಿ ನೇಸರ ಕಂಪ,ತಾಲೂಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ,,ದಾಸಪ್ಪ ರೈ ಉಪ್ಪಳಿಗೆ, ಅಮೂಲ್ಯ, ವೇಣಿ , ಸುಮಲ ಉಪಸ್ಥಿತರಿದ್ದರು.