ವಿಟ್ಲ : ಕೋವಿಡ್ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳು (ಮೆಡಿಕಲ್ ಶಾಪ್ ಮತ್ತು ಪಡಿತರ ಅಂಗಡಿ) ಹೊರತುಪಡಿಸಿ, ಮೇ. 27 ರಿಂದ ಜೂನ್. 7 ರ ವರೆಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ತನಕ ವಾರದಲ್ಲಿ ನಾಲ್ಕು ದಿನ (ಸೋಮವಾರ,ಬುಧವಾರ, ಶುಕ್ರವಾರ, ಆದಿತ್ಯವಾರ ) ತೆರದಿಡಬೇಕು ಎಂದು ಮೇ.24 ರಂದು ನಡೆದ ಪುಣಚ ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇತರೆ ದಿನವಾದ ಮಂಗಳವಾರ ,ಗುರುವಾರ ಮತ್ತು ಶನಿವಾರ ದಿನಗಳಂದು ಸಂಪೂರ್ಣ ಲಾಕ್ಡೌನ್
ಮಾಡಬೇಕೆಂದು ನಿರ್ಣಯಿಸಿದೆ. ಕಾರ್ಯಪಡೆ ಕೈಗೊಂಡ ಸದರಿ ನಿರ್ಣಯಗಳಿಗೆ ಎಲ್ಲಾ ವ್ಯಾಪರಸ್ಥರು ಸಹಕಾರ
ನೀಡಬೇಕೆಂದು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪುಣಚ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.