ಅಬ್ಬಾ! ಎಷ್ಟೊಂದು ಕೆಲಸ ಇದೆ?! ಮನೆಗೆ ಬೇಕಾದ ದಿನಸಿ ತಗಳೋಕೂ ಸಮಯ ಸಿಗ್ತಾ ಇಲ್ವಲ್ಲಪ್ಪಾ? ಅನ್ನುವ ಚಿಂತೆ ಮನಸಲ್ಲಿ ಸಾಗ್ತಾ ಇರುತ್ತೆ .ಈಗಿನ ದಿನದಲ್ಲಂತೂ ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದೇ ಒಂದು ಸಾಹಸ..! ಯಾಕಂದ್ರೆ ನಮ್ಮ ದಿನ ಬಳಕೆಗೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಕಡೆ ಸಿಗುವುದು ಕೂಡಾ ಅಪರೂಪ.. ಆದ್ರೆ ಇನ್ಮುಂದೆ ಈ ದಿನ ಬಳಕೆ ವಸ್ತುಗಳ ಖರೀದಿಯ ಟೆನ್ಶನ್ ಇರೋದಿಲ್ಲ..
ಅದ್ಹೇಗೆ ಅಂತೀರಾ? ಯಸ್,ಪುತ್ತೂರಿನ ಜನತೆಗಿದು ಸಿಹಿಸುದ್ದಿ.ಪುತ್ತೂರಿಗರ ಅಚ್ಚುಮೆಚ್ಚಿನ ಮಾರ್ಕೆಟ್ ಇದೀಗ ಪುತ್ತೂರಿನ ಜಿ.ಎಲ್.ಒನ್ ಮಾಲ್ ನಲ್ಲಿ ಕಾರ್ಯಾರಂಭ ಮಾಡಲಿದೆ.
ಹಾಗಾದ್ರೆ ಯಾವ್ದು ಈ ಮಾರ್ಕೆಟ್..!?
ಮಲ್ಟಿನ್ಯಾಷನಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಪುತ್ತೂರಿನ, ಪುತ್ತೂರಿಗರ ಹೆಮ್ಮೆಯ ಬ್ರ್ಯಾಂಡ್ “ಮಂಗಲ್ ಹೈಪರ್ ಮಾರ್ಕೆಟ್” ಏ.1 ರಿಂದ ಜಿ.ಎಲ್.ಒನ್ ಮಾಲ್ ನಲ್ಲಿ ಕಾರ್ಯ ನಿರ್ವಹಿಸಲಿದೆ.
ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್ ರವರ ಮಾರ್ಗದರ್ಶನದೊಂದಿಗೆ ಕಳೆದ 20 ವರ್ಷಗಳಿಂದ ಗ್ರಾಹಕರೊಂದಿಗೆ ಅವಿಸ್ಮರಣೀಯ ಬಾಂಧವ್ಯವನ್ನು ಹೊಂದಿರುವ “ಮಂಗಲ್ ಸ್ಟೋರ್ಸ್”..
ಉತ್ಪನ್ನಗಳ ಗುಣಮಟ್ಟ, ಸ್ಪರ್ಧಾತ್ಮಕ ಬೆಲೆ, ಗ್ರಾಹಕಸ್ನೇಹಿ ಸಿಬ್ಬಂದಿಗಳ ನಗುಮೊಗದ ಸ್ವಾಗತ, ಭರವಸೆಯ ಖರೀದಿ, ಸಂತೃಪ್ತಿಯ ಸೇವೆಗಿಂತಲೂ ಗ್ರಾಹಕರು ಸಂಸ್ಥೆ ಮೇಲಿಟ್ಟಿರುವ ನಂಬಿಕೆ ಅಚಲವಾಗಿದ್ದು, ನಂಬಿಕೆಯೇ ಮಂಗಲ್ ಸ್ಟೋರ್ ಅನ್ನು ಖರೀದಿಗೆ ಅಚ್ಚುಮೆಚ್ಚಿನ ತಾಣವಾಗಿ ರೂಪುಗೊಳಿಸಿದೆ.
ಇದೀಗ ಗ್ರಾಹಕರ ಇನ್ನೂ ಹೆಚ್ಚಿನ ಅನುಕೂಲಕ್ಕಾಗಿ ಪುತ್ತೂರು ಪೇಟೆಯ ಹೃದಯಭಾಗದಲ್ಲಿ ಮಂಗಲ್ ಹೈಪರ್ ಮಾರ್ಕೆಟ್
ಅನ್ನು ಪ್ರಾರಂಭಿಸಲಾಗುತ್ತಿದ್ದು, ಗ್ರಾಹಕರಿಗೆ ಇಲ್ಲಿ ಕಡಿಮೆ ದರಗಳಲ್ಲಿ ವಸ್ತುಗಳು ದೊರಕಲಿದೆ.
ದಿನನಿತ್ಯದ ಆವಶ್ಯಕತೆಗಳಿಗೆ ಬೇಕಾಗುವ ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು, ಉಚಿತ ಪಾರ್ಕಿಂಗ್‌ನೊಂದಿಗೆ ಆಹ್ಲಾದಕರ ವಾತಾವರಣದಲ್ಲಿ ಆರಾಮವಾಗಿ ಶಾಪಿಂಗ್ ಮಾಡಬಹುದಾಗಿದೆ.
ಪ್ರೆಸ್ಟೋ ಕಂಪೆನಿಯ ಪ್ರೀಮಿಯಂ ಸ್ವೀಟ್ಸ್‌ಗಳ ವಿಶೇಷ ಕೌಂಟರ್ ಕೂಡ ಲಭ್ಯವಿದೆ.
ಏನಿದು ‘ಸರ್ವಮಂಗಲ್’..!?
ಯಾವುದೇ ಪೂಜೆ ಇರಲಿ, ಶುಭಸಮಾರಂಭವಿರಲಿ
ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳಿಗಾಗಿ ಹಲವು ಕಡೆ ಹೋಗಬೇಕೆಂದಿಲ್ಲ..! ನಿಮ್ಮ ಅಗತ್ಯದ ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳ ಪಟ್ಟಿಯಲ್ಲಿ ಮುಂಗಡವಾಗಿ ನೀಡಿ, ನಿಮ್ಮ ಮನೆಬಾಗಿಲಿಗೆ, ಯಾ ಸಭಾಭವನಕ್ಕೆ ತರಿಸಿಕೊಳ್ಳ ಬಹುದಾದಂತಹ ವಿಶೇಷ ಸೇವೆಯಾಗಿದೆ. ಯಾವುದೇ ಜಂಟಾಟವಿಲ್ಲದೇ, ನಿರಾಳವಾಗಿ ಸಂಭ್ರಮಾಚರಣೆಯನ್ನು ಆನಂದಿಸಬಹುದು..
“ಮಂಗಲ್ ಹೈಪರ್ ಮಾರ್ಕೆಟ್” ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ವಾರದ ಏಳು ದಿನಗಳಲ್ಲೂ ಕಾರ್ಯ ನಿರ್ವಹಿಸಲಿದೆ..ಇನ್ನು ಬೇಜಾರಿಲ್ಲ,ಆರಾಮಾಗಿ ಖರೀದಿಸಿ ನಿಮಗೆ ಬೇಕಾದ ಸಾಮಾಗ್ರಿಗಳನ್ನು ತ್ವರಿತವಾಗಿ ಪಡೆದುಕೊಳ್ಳಿ..





























