ಪುತ್ತೂರು : ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗನ ಚಿಕಿತ್ಸೆಗಾಗಿ ಕುಟುಂಬ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.
ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಸಮೀಪದ ಅಕಾಯಿಯ ವಿನೋದ್ ಎಂಬವರು ಮೆದುಳಿನ ರಕ್ತಸ್ರಾವ ತೊಂದರೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿನೋದ್ ಚಿಕಿತ್ಸೆಗಾಗಿ ಸುಮಾರು 12 ಲಕ್ಷ ಖರ್ಚಾಗಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ.
ವಿನೋದ್ ಕುಟುಂಬವು ಆರ್ಥಿಕ ಬಡ ಕುಟುಂಬವಾಗಿದ್ದು, ತಾಯಿ, ಚಿಕ್ಕಮ್ಮ, ಪತ್ನಿ ಹಾಗೂ ಒಂದು ವರುಷದ ಮಗುವಿನೊಂದಿಗೆ ವಾಸವಿದ್ದು, ವಿನೋದ್ ಕುಟುಂಬದ ಆಧಾರಸ್ತಂಭವಾಗಿದ್ದಾರೆ. ವಿನೋದ್ ಅವರ ಈ ಅನಾರೋಗ್ಯದಿ೦ದ ಕುಟುಂಬಕ್ಕೆ ದಿಕ್ಕುತೋಚದಂತಾಗಿದ್ದು, ಆಸ್ಪತ್ರೆಯ ಚಿಕಿತ್ಸೆಯ ಖರ್ಚಿಗಾಗಿ ದಾನಿಗಳ, ಸಂಘ ಸಂಸ್ಥೆಗಳ ಹಾಗೂ ಎಲ್ಲರ ಸಹಾಯದ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಹೆಸರು – ವಿನೋದ್ ಕುಮಾರ್
ಖಾತೆ ಸಂಖ್ಯೆ -70720100006383
ಶಾಖೆ – ಕುಂಬ್ರ
IFSC – BARBOVJKUMB
MICR ಕೋಡ್ – 575012043
