ಮುಂಬೈ : ಈವೆಂಟ್ ಮ್ಯಾನೆಜ್ಮೆಂಟ್ ಮಾಡುವ ಯುವತಿಗೆ ಮತ್ತು ಬರುವ ಪಾನೀಯ ಕೊಟ್ಟು ಗಂಡನಿಂದ ಅತ್ಯಾಚಾರ ಮಾಡಿಸಿದ್ದ ಬ್ಯೂಟಿಷಿಯನ್ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಮಲ್ವಾನಿ ಎನ್ನುವಲ್ಲಿ ಈ ಘಟನೆ ನಡೆದಿದೆ.
ಯುವತಿಯನ್ನು ಗಂಡನಿಂದ ಅತ್ಯಾಚಾರ ಮಾಡಿಸಿದ್ದ ಆರೋಪಿ ಮಹಿಳೆಯನ್ನು ಅರೆಸ್ಟ್ ಮಾಡಿದ್ದು, ಆಕೆಯ ಗಂಡನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಮಲ್ವಾನಿ ಪೊಲೀಸ್ ಠಾಣೆಯಲ್ಲಿ 22 ವರ್ಷದ ಸಂತ್ರಸ್ತೆ ಪ್ರಕರಣ ದಾಖಲು ಮಾಡಿದ್ದಾಳೆ.
ಈವೆಂಟ್ ಮ್ಯಾನೆಜ್ಮೆಂಟ್ ಮಾಡುವ ಯುವತಿಗೆ ಮೊದಲಿನಿಂದಲೂ ಬ್ಯೂಟಿಷಿಯನ್ ಮಹಿಳೆ ಗೊತ್ತಿತ್ತು. ಹೀಗಾಗಿ ಯಾವಾಗಲೂ ಮೇಕಪ್ ಮಾಡಿಸಿಕೊಳ್ಳಲು ಹೋಗುತ್ತಿದ್ದರಿಂದ ಪರಿಚಿತಲಾಗಿದ್ದಳು. ಅದರಂತೆ ಬ್ಯೂಟಿಷಿಯನ್ ಮಹಿಳೆ ಫೋನ್ ಮಾಡಿ ಯುವತಿಯನ್ನು ಮನೆಗೆ ಕರೆಯಿಸಿಕೊಂಡಿದ್ದಾಳೆ. ಬಳಿಕ ಮತ್ತು ಬರುವ ಪಾನೀಯವನ್ನು ಕುಡಿಸಿದ್ದಾಳೆ. ಅದನ್ನು ಕುಡಿಯುತ್ತಿದ್ದಂತೆ ಯುವತಿ ಪ್ರಜ್ಞೆ ತಪ್ಪಿ ಬೆಡ್ ಮೇಲೆ ಬಿದ್ದಿದ್ದಾಳೆ. ಬಳಿಕ ಗಂಡನಿಂದ ಅತ್ಯಾಚಾರ ಮಾಡಿಸಿದ್ದು, ಇದನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಯುವತಿಗೆ ಎಚ್ಚರವಾದ ನಂತರ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಗೊತ್ತು ಮಾಡಿಕೊಂಡಿದ್ದಾಳೆ. ಅಲ್ಲಿಂದ ಹೋಗಬೇಕು ಎನ್ನುವಷ್ಟರಲ್ಲಿ ವೀಡಿಯೋವನ್ನು ತೋರಿಸಿ 10 ಸಾವಿರ ರೂಪಾಯಿಗೆ ಬ್ಯೂಟಿಷಿಯನ್ ಮಹಿಳೆ ಮತ್ತು ಪತಿ ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಯುವತಿ ಒಪ್ಪದ ಕಾರಣ ಆಕೆ ಮೇಲೆ ಇಬ್ಬರು ಸೇರಿ ಹಲ್ಲೆ ಮಾಡಿದ್ದಾರೆ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ಮಹಿಳೆ ಮಲ್ವಾನಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

























