ನರಿಮೊಗರು : ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರವನ್ನು ಮೆಸ್ಕಾಂ ನವರ ಸಹಾಯದೊಂದಿಗೆ, ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ಅಧ್ಯಕ್ಷರು ಹಾಗೂ ಸದಸ್ಯರು ಗಳು ತೆರವುಗೊಳಿಸಿದರು.
ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್. ಮಾಜಿ ಪಂಚಾಯತ್ ಸದಸ್ಯ ಸುಂದರ ಬಿಕೆ. ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ. ಬಾಲಕೃಷ್ಣ ಪೂಜಾರಿ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಅನಿಲ್ ಕಣ್ಣರ್ನೂಜಿ. ಯೋಗೀಶ್ ಕಲ್ಲಮ. ಪ್ರಸಾದ್. ಸೇರಿದಂತೆ ಸದಸ್ಯರು ಕೆಲಸದಲ್ಲಿ ಭಾಗಿಯಾದರು. ಶ್ರೀಧರ್ ನಾಯ್ಕ್ ಅವರು ಮೆಷಿನ್ ಉಚಿತ ವಾಗಿ ನೀಡಿದರು. ಧನಂಜಯ ನಾಯ್ಕ್ ಅವರು ಮರ ಎಳೆಯಲು ಬೇಕಾದ ಹಗ್ಗ ಮತ್ತು ಪರಿಕರ ಒದಗಿಸಿದರು.
ಮೆಸ್ಕಾಂ ಜೆ ಇ ಸುಂದರ ಅವರು ವಿನಂತಿಸಿಕೊಂಡ ಮೇರೆಗೆ ಅರುಣ್ ಪುತ್ತಿಲ ಅವರು ಲೈನ್ ಮೆಸ್ಕಾಂ ಲೈನ್ ಮೆನ್ ಗಳ ಉಪಸ್ಥಿಯಲ್ಲಿ ಈ 2 ದೊಡ್ಡ ಮರಗಳನ್ನು ತೆರವು ಗೊಳಿಸಿ ಮಳೆಗಾಳದಲ್ಲಿ ಸಂಭಾವಿಸಬಹುದಾದ ಭಾರಿ ದುರಂತ ಮತ್ತು ನಷ್ಟಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.
ಈ 2 ಮರಗಳು ಮುಖ್ಯ ರಸ್ತೆಗೆ ಬೀಳುವ ಸ್ಥಿತಿಯಲ್ಲಿ ಈ ಇಲಾಖೆ ಯ ಕೆಲಸವನ್ನು ಸಾರ್ವಜನಿಕ ಸಂಘಗಳು ಮಾಡಿದ್ದು ವ್ಯಾಪಾಕವಾಗಿ ಸಾರ್ವಜನಿಕರ ಪ್ರಸಂಸೆ ವ್ಯಕ್ತವಾಗಿದೆ. ಸಂಚಾರಿ ಪೊಲೀಸ್ ಇಲಾಖೆ ಸಿಬಂದಿಗಳು ರಸ್ತೆ ಸಂಚಾರ ಬಂದ್ ಮಾಡಿ ಸಹಕರಿಸಿದರು.