ಸುಳ್ಯದ ಮೋಹನ್ ಶೇಟ್ ಜ್ಯುವೆಲ್ಲರಿ ಮಾರ್ಟ್ ನಲ್ಲಿ ಚಿನ್ನ ಕದ್ದು ಸಿಕ್ಕಿ ಬಿದ್ದಿದ್ದ ಕಳ್ಳರಲ್ಲಿ ಓರ್ವ ಅಸೌಖ್ಯಕ್ಕೊಳಗಾಗಿ ಸ್ಕ್ಯಾನಿಂಗ್ ವೇಳೆ ಚಿನ್ನ ನುಂಗಿರುವ ವಿಷಯ ಬಹಿರಂಗ ಗೊಂಡ ಘಟನೆ ವರದಿಯಾಗಿದೆ.
ಚಿನ್ನ ಕಳ್ಳತನ ಪ್ರಕರಣದಲ್ಲಿ ಇಬ್ಬರು ಕಳ್ಳರನ್ನು ಪೋಲೀಸರು ಬಂಧಿಸಿದ್ದರು. ಅವರಲ್ಲಿ ತಂಗಚ್ಚನ್ ಎಂಬ ಒಬ್ಬ ಆರೋಪಿಯನ್ನು ನಿನ್ನೆ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಶಿಬು ಎಂದ ಇನ್ನೊಬ್ಬ ಆರೋಪಿಯ ಮೆಡಿಕಲ್ ಮಾಡಿಸಲು ಬಾಕಿ ಇದ್ದುದರಿಂದ ಇಂದು ಹಾಜರುಪಡಿಸಲು ನಿರ್ಧರಿಸಲಾಗಿತ್ತು. ಸಂಜೆಯ ಬಳಿಕ ಆತನಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಸರಕಾರಿ ಆಸ್ಪತ್ರೆಗೆ ಆತನನ್ನು ಪೋಲೀಸರು ಕರೆದೊಯ್ದಾಗ ಆತನಿಗೆ ಹರ್ನಿಯಾ ಆಗಿರಬಹುದೆಂಬ ಅಭಿಪ್ರಾಯ ವ್ಯಕ್ತವಾಯಿತೆನ್ನಲಾಗಿದೆ. ಆಪರೇಶನ್ ನ ಉದ್ದೇಶದಿಂದ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ರಾತ್ರಿ ಸ್ಕ್ಯಾನ್ ಮಾಡಿ ನೋಡುವಾಗ ಕರುಳಿನಲ್ಲಿ ಚಿನ್ನದ ಸರ ಇರುವುದು ಗೊತ್ತಾಯಿತೆನ್ನಲಾಗಿದೆ. ಆಪರೇಶನ್ ಮಾಡಿ ಚಿನ್ನ ಹೊರತೆಗೆಯಲು ಅಸ್ಪತ್ರೆಯ ವೈದ್ಯರು ಕ್ರಮ ತೆಗೆದುಕೊಂಡಿದ್ದಾರೆ. ಆರೋಪಿ ಚಿನ್ನವನ್ನು ಯಾವಾಗ ನುಂಗಿದನೆಂಬ ಬಗ್ಗೆ ವಿಚಾರಣೆಯಿಂದ ತಿಳಿದುಬರಬೇಕಿದೆ.