ಪುತ್ತೂರು : ಪ್ರಧಾನಮಂತ್ರಿ ನರೇಂದ್ರ ಮೋದೀಯವರ ನೇತೃತ್ವದ ಕೇಂದ್ರ ಸರಕಾರ ಏಳು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸೇವಾಹಿ ಸಂಘಟನ್ ಎಂಬ ಹೆಸರಿನಲ್ಲಿ ದೇಶಾದ್ಯಂತ ಆಚರಣೆ ನಡೆಸಲಾಗುತ್ತಿದ್ದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ವ್ಯಾಪ್ತಿಯ ಬಲ್ನಾಡು ಗ್ರಾಮದ ಬೂತ್ 105 ಸಾಜದಲ್ಲಿ ಸಸಿ ನೆಡಲಾಯಿತು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಧಾರ್ಮಿಕ ಪರಿಷದ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ತಾಲೂಕ್ ಒಬಿಸಿ ಮೋರ್ಚಾದ ಸದಸ್ಯರಾದ ಸುಧಾಕರ ನಾಯಕ್, ತಾಲೂಕು ಎಸ್.ಟಿ ಮೋರ್ಚಾದ ಸದಸ್ಯ ಬಾಲಕೃಷ್ಣ ನಾಯ್ಕ ಮುರುಂಗಿ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರವಿಚಂದ್ರ ಸಾಜ, ಶೋಭಾ ಮುರುಂಗಿ, ವಸಂತಿ ಹರೀಶ್ ಪೂಜಾರಿ, ಬಲ್ನಾಡು ಶಕ್ತಿಕೇಂದ್ರ ಸಂಚಾಲಕರಾದ ಅಕ್ಷಯ್ ಶೆಟ್ಟಿ ಸಲ್ಪಾಜೆ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.