ಪುತ್ತೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಭಾರತದ ಪ್ರಧಾನಿಯಾಗಿ ಏಳು ವರ್ಷಗಳನ್ನು ಪೂರೈಸಿದ ದಿನವನ್ನು ” ಸೇವಾಹೀ ಸಂಘಟನ್” ಎಂಬ ಹೆಸರಿನಲ್ಲಿ ದೇಶಾದ್ಯಂತ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಚರಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ನಗರ ಸಭಾ ಸದಸ್ಯ ಪ್ರೇಮ್ ಕುಮಾರ್ ನೇತೃತ್ವದಲ್ಲಿ ಆದರ್ಶ ಆಸ್ಪತ್ರೆ ಬಳಿ ಗುರುಪ್ರಸಾದ್ ರವರ ಮನೆಯ ಬಳಿ ಗಿಡವನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಬೂತ್ 10 ರ ಅಧ್ಯಕ್ಷ ಲೋಹಿತ್ ದಾಸ್ ಹೆಗ್ಡೆ, ಕಾರ್ಯದರ್ಶಿ ಗುರುಪ್ರಸಾದ್ ದೇವಾಡಿಗ, ಯುವ ಮೋರ್ಚಾ ಕಾರ್ಯದರ್ಶಿ ಕೌಶಿಕ್ ಎಂ. ಎಲ್, ತೇಜಸ್,ಶ್ರೀಧರ್ ನಡುಬೈಲ್, ಮೊಕ್ಷಿತ್, ಕೀರ್ತನ್ ಮತ್ತಿತರರು ಉಪಸ್ಥಿತರಿದ್ದರು.ಕೋವಿಡ್ 19 ಅಧಿನಿಯಮವನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಸಲಾಯಿತು.