ಉದ್ಯಮ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಶಾಫಿ ಮುಹಾದ್ ಸಾರಥ್ಯದಲ್ಲಿ ಮುಹಾದ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು ನ. 22 ರಂದು ಪುತ್ತೂರಿನ ಹೃದಯ ಭಾಗವಾದ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.
ತಾಲೂಕಿನಲ್ಲಿ ಹೆಸರು ಪಡೆದಿರುವ ಪ್ರತಿಷ್ಠಿತ 5 ತಂಡಗಳಾದ ಹಂಝ ಮಾಲಕತ್ವದ ಇಚ್ಛಾ ಲಯನ್ಸ್ ಬಪ್ಪಳಿಗೆ , ಹನೀಫ್ ಮಾಲಕತ್ವದ ಬೈಪಾಸ್ ಹೀರೋಸ್, ಶಾಫಿ ಮುಹಾದ್ ಮಾಲಕತ್ವದ ಮುಹಾದ್ ಸ್ಟ್ರೈಕರ್ಸ್, ಅಶೋಕ್ ಬಪ್ಪಳಿಗೆ ಮಾಲಕತ್ವದ ಬಿಬಿಸಿ ವಾರಿಯರ್ಸ್, ಅಬ್ಬು ದುಬೈ ಮಾಲಕತ್ವದ ಸನ್ ರೈಸರ್ಸ್ ತಂಡಗಳ ನಡುವೆ ಕ್ರಿಕೆಟ್ ಜಗತ್ತಿನ ಗೆಲುವಿನ ಹೆಜ್ಜೆಗೆ ಪೈಪೋಟಿ ಪಂದ್ಯಾಟ ನಡೆಯಲಿದೆ.
ಈ ಪಂದ್ಯಾಟದ ಸಂಪೂರ್ಣ ನೇರಪ್ರಸಾರವು ZOOM.IN TV ಯಲ್ಲಿ ನಡೆಯಲಿದೆ.