ಪುತ್ತೂರು : ಸಾಮೆತ್ತಡ್ಕ 2ನೇ ಕ್ರಾಸ್ ನಿವಾಸಿ ಓಮ್ನಿ ಚಾಲಕ ಶಿವಪ್ರಸಾದ್ (39) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಸಾಮೆತ್ತಡ್ಕ ದಿ.ಗಣೇಶ್ ರಾವ್ ಅವರ ಪುತ್ರ ಶಿವಪ್ರಸಾದ್ ಅವಿವಾಹಿತರಾಗಿದ್ದು, ಮಾರುತಿ ಓಮ್ನಿಯಲ್ಲಿ ಶಾಲಾ ಮಕ್ಕಳನ್ನು ಟ್ರಿಪ್ ಮಾಡುತ್ತಿದ್ದರು.
ಜು.14ರಂದು ರಾತ್ರಿ ಮನೆಯಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿ ಪತ್ತೆಯಾಗಿದ್ದಾರೆ.
ಮೃತರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ನಗರಸಭೆ ಸ್ಥಳೀಯ ಸದಸ್ಯ ಮನೋಹರ್ ಕಲ್ಲಾರೆ ಸಹಿತ ಕಲ್ಲಾರೆಯ ಯುವಕ ವೃಂದದವರು ಮೃತ ಶಿವಪ್ರಸಾದ್ ಅವರ ಮನೆಗೆ ಭೇಟಿ ನೀಡಿದರು.



























