Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತೆಯ ಹಣ ಕಳ್ಳತನ – ಮೂವರು ಕಳ್ಳಿಯರ ಬಂಧನ

    ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತೆಯ ಹಣ ಕಳ್ಳತನ – ಮೂವರು ಕಳ್ಳಿಯರ ಬಂಧನ

    ʻಜೀವನ ಸಾಕಾಗಿದೆʼ – ಗೆಳೆಯನಿಗೆ ಕೊನೇ ಮೆಸೇಜ್‌ ಮಾಡಿ ಸ್ಯಾಂಕಿ ಕೆರೆಗೆ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ..!!

    ʻಜೀವನ ಸಾಕಾಗಿದೆʼ – ಗೆಳೆಯನಿಗೆ ಕೊನೇ ಮೆಸೇಜ್‌ ಮಾಡಿ ಸ್ಯಾಂಕಿ ಕೆರೆಗೆ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ..!!

    ಪುತ್ತೂರು : ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ: ಆಮಂತ್ರಣ ಪತ್ರ ಬಿಡುಗಡೆ : 10,000 ಕ್ಕೂ ಅಧಿಕ ಸೇವೆಯ ನಿರೀಕ್ಷೆ – ಪುತ್ತಿಲ..!

    ಪುತ್ತೂರು : ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ: ಆಮಂತ್ರಣ ಪತ್ರ ಬಿಡುಗಡೆ : 10,000 ಕ್ಕೂ ಅಧಿಕ ಸೇವೆಯ ನಿರೀಕ್ಷೆ – ಪುತ್ತಿಲ..!

    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!!

    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!!

    ತೂಗುಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ ನಿಧನ..!!

    ತೂಗುಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ ನಿಧನ..!!

    ಬೆಳ್ತಂಗಡಿ: ಬೈಕ್ ಸ್ಕಿಡ್ : ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು, ಸವಾರನಿಗೆ ಗಾಯ..!!

    ಬೆಳ್ತಂಗಡಿ: ಬೈಕ್ ಸ್ಕಿಡ್ : ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು, ಸವಾರನಿಗೆ ಗಾಯ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜಕೀಯ

68 ವರ್ಷಗಳ ಬಳಿಕ ಬೆಂಗಳೂರು ವಿಧಾನಸೌಧಕ್ಕೆ ಹೊಸ ಗೆಟಪ್ : ಬಾಹ್ಯ ಸೌಂದರ್ಯದಂತೆ ಆಂತರಿಕ ಅಲಂಕಾರಕ್ಕೂ ಪ್ರಾಶಸ್ತ್ಯ ನೀಡಿದ ಸ್ಪೀಕರ್ ಖಾದರ್

July 15, 2024
in ರಾಜಕೀಯ, ರಾಜ್ಯ
0
68 ವರ್ಷಗಳ ಬಳಿಕ ಬೆಂಗಳೂರು ವಿಧಾನಸೌಧಕ್ಕೆ ಹೊಸ ಗೆಟಪ್ : ಬಾಹ್ಯ ಸೌಂದರ್ಯದಂತೆ ಆಂತರಿಕ ಅಲಂಕಾರಕ್ಕೂ ಪ್ರಾಶಸ್ತ್ಯ ನೀಡಿದ ಸ್ಪೀಕರ್ ಖಾದರ್
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಂಗಳೂರು : ಕೆಂಗಲ್ ಹನುಮಂತಯ್ಯ ಅವರ ಕನಸಿನ ಅರಮನೆ ರಾಜ್ಯಾಡಳಿತದ ಪ್ರಾಮುಖ್ಯ ಕಟ್ಟಡ ಇತಿಹಾಸ ಪ್ರಸಿದ್ಧ ವಿಧಾನಸೌಧ ಹೊಸ ಖದರ್ ನೊಂದಿಗೆ ಮೈದೆಳೆದು ನಿಂತಿದೆ.

Advertisement
Advertisement

Advertisement

ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ದೂರದೃಷ್ಟಿ ಯೋಜನೆ ಮತ್ತು ಯೋಚನೆಯ ಫಲವಾಗಿ ಸಿದ್ದರಾಮಯ್ಯ ಸರಕಾರದ ಸಂಪೂರ್ಣ ಸಹಕಾರದೊಂದಿಗೆ 68 ವರ್ಷದ ಇತಿಹಾಸವಿರುವ ಕಟ್ಟಡ ಪುನಶ್ಚೇತನ ಕಂಡಿದೆ.

ವಿಧಾನ ಸೌಧ ಅಂತರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಸುಂದರ ವಾಸ್ತು ಶಿಲ್ಪ ಕಟ್ಟಡ. ಇಂತಹ ಮನೋಹರ ಆಡಳಿತ ಸೌಧ ಬೇರೆ ರಾಜ್ಯದಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ಹೊರಗಿನ ಸೌಂದರ್ಯಕ್ಕೆ ಕುಂದು ಬಾರದಂತೆ ಒಳಗಿನ ಸೌಂದರ್ಯವನ್ನೂ ಬಿಂಬಿಸಬೇಕು ಎಂದು ಕನಸು ಕಂಡವರು ಪ್ರಸ್ತುತ ಕಾರ್ಯಾಚರಿಸುತ್ತಿರುವ ಸ್ಪೀಕರ್ ಯು.ಟಿ.ಖಾದರ್. ಈ ಯೋಜನೆಗೆ ಸಾಥ್ ನೀಡಿದ್ದು ಸಿದ್ದರಾಮಯ್ಯ ಸರಕಾರ.

ರಾಜ್ಯದ ಏಳೂವರೆ ಕೋಟಿ ಜನರ ಪೈಕಿ ಶಾಸಕರಾಗುವವರು 224 ಮಂದಿ. ಶಾಸಕರಾಗಿ ವಿಧಾನಸೌಧ ಪ್ರವೇಶಿಸುವುದೇ ಒಂದು ಭಾಗ್ಯ. ಅದರಲ್ಲೂ ಇಡೀ ವಿಧಾನಸೌಧಕ್ಕೆ ಸಭಾಧ್ಯಕ್ಷರಾಗುವುದು ಎಂದರೆ ಸಣ್ಣ ಮಾತಲ್ಲ. ಅದು ಯು.ಟಿ.ಖಾದರ್ ಗೆ ಕರುನಾಡು ನೀಡಿದ ದೊಡ್ಡ ಕೊಡುಗೆ ಮತ್ತು ಗೌರವ. ಈ ಗೌರವಕ್ಕೆ ಚ್ಯುತಿ ಬಾರದಂತೆ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಖಾದರ್ ಅಸೆಂಬ್ಲಿಗೆ ಹೊಸ ಖದರ್ ನೀಡುತ್ತಿದ್ದಾರೆ.

ವಿಧಾನಸೌಧ ಸುಂದರ ರೂಪದಲ್ಲಿದ್ದರೂ ಅದರೊಳಗೆ ಪ್ರವೇಶಿಸುವಾಗ ಕಬ್ಬಿಣದ ಗ್ರಿಲ್ ನ ಧೂಳು ಹಿಡಿದಿರುವ ಹಳೆಯ ಕಾರಿಡಾರ್, ಬಾಗಿಲುಗಳು ಕಟ್ಟಡದ ಪ್ರಸಿದ್ಧಿಗೆ ಕಪ್ಪು ಚುಕ್ಕೆಯಾಗಿ ಕಾಣುತ್ತಿತ್ತು. ಮಣ್ಣು, ಧೂಳಿನ ಕಳೆಯಿರುವ ನೆಲ ಎದುರುಗೊಳ್ಳುತ್ತಿತ್ತು. ಹೊರದೇಶದ ವಿಐಪಿ ಗಳು, ಸೆಲೆಬ್ರಿಟಿಗಳು ವಿಧಾನಸೌಧಕ್ಕೆ ಭೇಟಿ ನೀಡುವಾಗ ಅವರನ್ನು ಹಳೆಯ ಗ್ರಿಲ್ ಕಿಟಕಿ, ಬಾಗಿಲುಗಳೇ ಸ್ವಾಗತಿಸುತ್ತಿತ್ತು. ಇದಕ್ಕೆ ಬದಲಾವಣೆ ತಂದ ಸ್ಪೀಕರ್ ಯು.ಟಿ.ಖಾದರ್ ಸಿದ್ದರಾಮಯ್ಯ ಸರಕಾರದ ಸಹಭಾಗಿತ್ವದಲ್ಲಿ ಹೊಸ ರೂಪ ನೀಡಿದ್ದಾರೆ. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದಿಂದ ಬೀಟೆಮರ ಮತ್ತು ತೇಗದಮರ ಪಡೆದು ಸ್ವಾಗತ ದ್ವಾರಗಳಿಗೆ ಹೊಸ ಗೆಟಪ್ ನೀಡಿದ್ದಾರೆ.

ಪ್ರಸ್ತುತ ವಿಐಪಿಗಳು, ಮಂತ್ರಿ ಮಹೋದಯರು ಸಾಗುವ ಪೂರ್ವ ಮತ್ತು ಪಶ್ಚಿಮದ ಮುಖ್ಯದ್ವಾರಗಳು ಸಾಂಪ್ರದಾಯಿಕ ಶೈಲಿಯ ಮರದ ಕೆತ್ತನೆಯಿಂದ ನಳನಳಿಸುತ್ತಿದೆ. ನೆಲಕ್ಕೆ ಹಸಿರು ಮಕಮಲ್ಲು, ಮಹಡಿ ಏರುವ ಸ್ಟೆಪ್ ಗಳಿಗೆ ಕೆಂಪು ಕಾರ್ಪೆಟ್ ಹಾಸಲಾಗಿದೆ. ಕಲಾಪ ನಡೆಯುವಲ್ಲಿ ಮತ್ತು ಅವಶ್ಯಕ ಸ್ಥಳಗಳ ಗೋಡೆಗಳಿಗೆ ರಾಜ್ಯ ಸರಕಾರದ ಲಾಂಛನ “ಗಂಡಬೇರುಂಡ” ಆಕೃತಿಯ ಗಡಿಯಾರ ಅಳವಡಿಸಲಾಗಿದೆ. ಒಟ್ಟಿನಲ್ಲಿ ವಿಧಾನಸೌಧದ ಒಳಾಂಗಣ ಹೊಸ ಖದರ್ ನೊಂದಿಗೆ ಕಂಗೊಳಿಸುತ್ತಿದೆ. ಇನ್ನು ಸೌಧಕ್ಕೆ ನೂರು ವರ್ಷ ಕಳೆದರೂ ಈಗಿನ ಪುನಶ್ಚೇತನ ಇತಿಹಾಸದ ಪುಟ ಸೇರಲಿದೆ. ಇದು ಕೇವಲ ಆರಂಭವಷ್ಟೆ. ಮುಂದಿನ ದಿನಗಳಲ್ಲಿ ಇಡೀ ವಿಧಾನಸೌಧದ ಒಳಾಂಗಣವನ್ನು ಹಳೆಯ ರೂಪ ನೀಡಿ ನಾವೀನ್ಯ ಶೈಲಿಯಲ್ಲಿ ಬದಲಿಸುವ ಕನಸನ್ನು ಸ್ಪೀಕರ್ ಖಾದರ್ ಹೊಂದಿದ್ದಾರೆ.

ಸ್ಪೀಕರ್ ಯು.ಟಿ. ಖಾದರ್ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಮತ್ತು ವಿಧಾನಸಭಾ ವಿಶೇಷ ಬೋರ್ಡ್ ಮೆಂಬರ್ ಎಚ್.ಕೆ. ಪಾಟೀಲ್, ಗೃಹ ಸಚಿವ ಜಿ. ಪರಮೇಶ್ವರ್, ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಈ ವೇಳೆ ಉಪಸ್ಥಿತರಿದ್ದರು.

ಯು.ಟಿ.ಖಾದರ್ ಅವರು ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ ಅವರ ಕಾರ್ಯದಕ್ಷತೆ ಗುರುತಿಸಿ ಕೇಂದ್ರ ಸರಕಾರ ರಾಷ್ಟ್ರಪ್ರಶಸ್ತಿ ನೀಡಿತ್ತು. ಆಹಾರ ಸಚಿವರಾಗಿದ್ದಾಗ ಪಡಿತರ ಚೀಟಿಯಲ್ಲಿ ತಂದ ಅಮೂಲಾಗ್ರ ಬದಲಾವಣೆಗಾಗಿ “ಖಾದರ್ ಕಾರ್ಡ್” ಎಂಬ ಪ್ರಸಿದ್ಧಿಗೆ ಪಾತ್ರರಾಗಿದ್ದರು. ಪ್ರಸತ್ತು ಸ್ಪೀಕರ್ ಆಗಿ ಈ ಹಿಂದೆ ಯಾರೂ ಮಾಡದ ಬದಲಾವಣೆಯನ್ನು ವಿಧಾನಸೌಧದಲ್ಲಿ ಕಾರ್ಯಗತಗೊಳಿಸುವ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚೊತ್ತಿದ್ದಾರೆ.

Previous Post

ಪುತ್ತೂರು : ಸಾಮೆತ್ತಡ್ಕ ನಿವಾಸಿ ಶಿವಪ್ರಸಾದ್ ನೇಣು ಬಿಗಿದು ಆತ್ಮಹತ್ಯೆ!

Next Post

ಮಂಗಳೂರು : ಪ್ರತಿಭಟನೆಗೆ ಅನುಮತಿ ನಿರಾಕರಣೆ : ‘ಸಂವಿಧಾನದಲ್ಲಿ ಅಡಕವಾಗಿರುವ ನಾಗರೀಕ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ’ ; ಹಿಂದು ಮಹಿಳಾ ಸುರಕ್ಷಾ ಸಮಿತಿ ಆರೋಪ

OtherNews

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್..!!
ರಾಜಕೀಯ

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್..!!

July 5, 2026
“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!
ಬೆಂಗಳೂರು

“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!

June 29, 2026
ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!
ಬೆಳ್ತಂಗಡಿ

ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!

June 26, 2026
ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!
ಬೆಂಗಳೂರು

ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!

June 25, 2026
ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!
Featured

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!

June 21, 2026
ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!
ರಾಜ್ಯ

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!

June 14, 2026

Leave a Reply Cancel reply

Your email address will not be published. Required fields are marked *

Recent News

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತೆಯ ಹಣ ಕಳ್ಳತನ – ಮೂವರು ಕಳ್ಳಿಯರ ಬಂಧನ

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತೆಯ ಹಣ ಕಳ್ಳತನ – ಮೂವರು ಕಳ್ಳಿಯರ ಬಂಧನ

July 7, 2026
ʻಜೀವನ ಸಾಕಾಗಿದೆʼ – ಗೆಳೆಯನಿಗೆ ಕೊನೇ ಮೆಸೇಜ್‌ ಮಾಡಿ ಸ್ಯಾಂಕಿ ಕೆರೆಗೆ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ..!!

ʻಜೀವನ ಸಾಕಾಗಿದೆʼ – ಗೆಳೆಯನಿಗೆ ಕೊನೇ ಮೆಸೇಜ್‌ ಮಾಡಿ ಸ್ಯಾಂಕಿ ಕೆರೆಗೆ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ..!!

July 7, 2026
ಪುತ್ತೂರು : ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ: ಆಮಂತ್ರಣ ಪತ್ರ ಬಿಡುಗಡೆ : 10,000 ಕ್ಕೂ ಅಧಿಕ ಸೇವೆಯ ನಿರೀಕ್ಷೆ – ಪುತ್ತಿಲ..!

ಪುತ್ತೂರು : ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ: ಆಮಂತ್ರಣ ಪತ್ರ ಬಿಡುಗಡೆ : 10,000 ಕ್ಕೂ ಅಧಿಕ ಸೇವೆಯ ನಿರೀಕ್ಷೆ – ಪುತ್ತಿಲ..!

July 7, 2026
ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!!

ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!!

July 7, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.