ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸ ಅರ್ಹತಾ ಮಾನದಂಡಗಳು ಬಹಿರಂಗಗೊಂಡಿವೆ. ಈ ಯೋಜನೆಯಡಿ, ಕುಟುಂಬದ ಯಜಮಾನಿ ಮಹಿಳೆಯರಿಗೆ ಹಣ ಸಿಗಲಿದ್ದು, ಅಂತ್ಯೋದಯ, ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿಗಳಲ್ಲಿ ಯಜಮಾನಿ ಎಂದು ನಮೂದಾಗಿರುವ ಮಹಿಳೆಯರು ಮಾತ್ರ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಕೆಗೆ ಏನೆಲ್ಲ ದಾಖಲೆ ಅಗತ್ಯ?
- ಕುಟುಂಬದ ಯಜಮಾನಿಯ ಆಧಾರ್ ಕಾರ್ಡ್ ಪ್ರತಿ
- ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಬ್ಯಾಂಕ್ ಪಾಸ್‌ಬುಕ್
- ಯಜಮಾನಿಯ ಹೆಸರಿನಲ್ಲಿರುವ ರೇಷನ್ ಕಾರ್ಡ್
ಯಾರಿಗೆಲ್ಲ ಸೌಲಭ್ಯ ಸಿಗಲ್ಲ?
ಯೋಜನೆಯ ಲಾಭ ಪಡೆಯಲು ಕೆಲವು ನಿರ್ಬಂಧಗಳನ್ನು ಸಹ ವಿಧಿಸಲಾಗಿದೆ. ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಅವರು ಈ ಯೋಜನೆಗೆ ಅನರ್ಹರಾಗುತ್ತಾರೆ. ಅದೇ ರೀತಿ, ಯಜಮಾನಿ ಅಥವಾ ಅವರ ಪತಿ ಜಿಎಸ್‌ಟಿ ಪಾವತಿದಾರರಾಗಿದ್ದರೂ ಸಹ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಿಲ್ಲ.


























