ಕುಂದಾಪುರ : ಯಡಮೊಗೆ ಗ್ರಾಮಸ್ಥನ ಕೊಲೆ ಪ್ರಕರಣ ಆರೋಪಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್‌ನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಯಡಮೊಗೆ ಹೊಸ ಬಾಳು ನಿವಾಸಿ ಉದಯ ಗಾಣಿಗ (45) ಎಂದು ಗುರುತಿಸಲಾಗಿದೆ. ರಾತ್ರಿ ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗ ಮೇಲೆ ಪ್ರಾಣೇಶ್ ಯಡಿಯಾಳ್ ಕಾರು ಚಲಾಯಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಉದಯ ಗಾಣಿಗನನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯದಲ್ಲೇ ಮೃತಪಟ್ಟಿದ್ದಾರೆ.
ಉದಯ ಗಾಣಿಗ ಗ್ರಾಮ ಪಂಚಾಯತ್ ನ ಅನ್ಯಾಯ ಅಕ್ರಮ ಬಯಲಿಗೇಳೆತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಾಣೇಶ್ ಯಡಿಯಾಳ್ ಮತ್ತು ಉದಯ ಗಾಣಿಗ ಮಧ್ಯೆ ವೈಯಕ್ತಿಕ ದ್ವೇಷ ವಿತ್ತು ಎನ್ನಲಾಗಿದೆ.
ಇನ್ನು ಕಾರು ಚಲಾಯಿಸಿ ಪರಾರಿಯಾಗಿದ್ದ ಪ್ರಾಣೇಶ್ ಯಡಿಯಾಳ್ ನಾಪತ್ತೆಯಾಗಿದ್ದು, ನಿನ್ನೆ ತಡರಾತ್ರಿ ಉಳ್ಳೂರು 74 ಗ್ರಾಮ ಪಂಚಾಯತ್ ಸದಸ್ಯರ ಮನೆಯಲ್ಲಿ ಪ್ರಾಣೇಶ್ ಯಡಿಯಾಳ್ ಇರುವ ಮಾಹಿತಿ ಪಡೆದು ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.