ಉಪ್ಪಿನಂಗಡಿ: ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಿಂದ ಮಾದರಿ ಶಾಲೆಯ ಅಂಗನವಾಡಿ ಕಟ್ಟಡದ ಬಳಿ ಸಸಿ ನೆಡುವ ಮೂಲಕ ಸರಳವಾಗಿ ವನಮಹೋತ್ಸವನ್ನು ಜೂ.6 ರಂದು ಆಚರಿಸಲಾಯಿತು.
ಈ ವೇಳೆ ಮಾತಾನಾಡಿದ ಕಮಾಡೆಂಟ್ ವರ್ಷಕ್ಕೆ ಒಂದು ಗಿಡ ನೆಟ್ಟರು ಅದು ಬಹುದೊಡ್ಡ ಕೊಡುಗೆ ಆಗಲಿದ್ದು ಈ ಮೂಲಕ ಪರಿಸರ ರಕ್ಷಣೆಗೆ ಒತ್ತು ಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಮಾಡೆಂಟ್ ಡಾ.ಮುರಳಿ ಮೋಹನ್ ಚೂಂತಾರು,ಪ್ರಭಾರ ಘಟಕಾಧಿಕಾರಿ ದಿನೇಶ್, ಬಿ,ಎ.ಎಸ್.ಎಲ್.ಜನಾರ್ಧನ ಆಚಾರ್ಯ, ಪ್ರವಾಹ ರಕ್ಷಣಾ ಕರ್ತವ್ಯದ ಸಮದ್, ಸೋಮನಾಥ್, ಠಾಣಾ ಕರ್ತವ್ಯದ ಸಿಬ್ಬಂದಿ, ಮಂಗಳೂರು ಘಟಕದ ಪ್ರವಾಹ ರಕ್ಷಣಾ ಗೃಹರಕ್ಷಕರು ಉಪಸ್ಥಿತರಿದ್ದರು.