ಪುತ್ತೂರು: ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಯವರು ಲಾಕ್ಡೌನ್ ನಿಯಮಗಳನ್ನು ಬಿಗಿಗೊಳಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಮತ್ತು ನಗರಸಭೆ ಪೌರಾಯುಕ್ತ ಮಧು ಎಸ್.ಎಮ್ ರವರು ಜೂ.8ರಂದು ಸ್ವತಃ ತಾವೇ ಕಾರ್ಯಾಚರಣೆಗೆ ಇಳಿದಿದ್ದಾರೆ.
ಅನಗತ್ಯವಾಗಿ ತಿರುಗಾಡುತ್ತಿರುವ ವಾಹನಗಳಿಗೆ ಪುತ್ತೂರು ಪೊಲೀಸರ ಸಹಕಾರದೊಂದಿಗೆ ಅವರು ಕಡಿವಾಣ ಹಾಕಿದ್ದಾರೆ.
ತಹಶೀಲ್ದಾರ್ ಮತ್ತು ಪೌರಾಯುಕ್ತರು ಬೆಳಗ್ಗಿನಿಂದಲೇ ದರ್ಬೆ ಪೊಲೀಸ್ ಚೆಕ್ ಪಾಯಿಂಟ್ ಬಳಿ ವಾಹನ ತಪಾಸಣೆ ನಡೆಸಿದ್ದಾರೆ.