ಬೆಳ್ತಂಗಡಿ : ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ವಿಘ್ನೇಶ್ ಭಂಡಾರಿ ಮೇಲೆ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಧರ್ಮಸ್ಥಳ ಪೋಲಿಸರು ಬಂಧಿಸಿದ್ದಾರೆ.
ಪ್ರಕರಣದ ಸಾರಾಂಶ :
ಬೆಳ್ತಂಗಡಿ ತಾಲೂಕು ಚಿಬಿದ್ರೆ ಗ್ರಾಮದ ಕತ್ತರಿಗುಡ್ಡೆ ನಿವಾಸಿ ಅಪ್ರಾಪ್ತ ಬಾಲಕಿ ನೆರೆ ಮನೆಯ ವಿಘ್ನೇಶ್ ಭಂಡಾರಿ ಎಂಬವರ ಮನೆಯಿಂದ ಅಳುತ್ತಾ ಬಂದಿದ್ದು, ಆಕೆಯ ತಾಯಿ ವಿಚಾರಿಸಿದಾಗ ಆಕೆಯು ನೆರೆ ಮನೆಯ ವಿಘ್ನೇಶ್ ಭಂಡಾರಿಯು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಬಗ್ಗೆ ವಿವರಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ಪೋಷಕರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಅವರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದು, ಆರೋಪಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕಲಂ: 354, ಐಪಿಸಿ ಮತ್ತು ಕಲಂ; 9(m),10,11(ii) ಪೋಕ್ಸೋ ಕಾಯ್ದೆ-2012 ಪ್ರಕರಣ ದಾಖಲಾಗಿದೆ.