ಪುತ್ತೂರು : ಅಕ್ಷಯ ಎಜ್ಯುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ರಿ. ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಕಾಲೇಜು ಚುನಾವಣಾ ಸಮಿತಿ ಮತ್ತು ಐಕ್ಯೂಎಸಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ಸ೦ಘ ಚುನಾವಣೆ ವಿದ್ಯುನ್ಮಾನ ಮತಯಂತ್ರದ ಮೂಲಕ ನೆರವೇರಿತು.
ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಜೀವನ್ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ತೃತೀಯ ಬಿ.ಎಸ್ಸಿ ಫ್ಯಾಷನ್ ಡಿಸೈನ್ ವಿಭಾಗದ ನವಮಿ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ತೃತೀಯ ಇಂಟೀರಿಯರ್ ಡಿಸೈನ್ ವಿದ್ಯಾರ್ಥಿನಿ ಪೂಜಿತ ಆಯ್ಕೆಯಾದರು.
ಆಯ್ಕೆಯಾದ ಮತ್ತು ಸ್ಪರ್ಧಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಆಡಳಿತಾಧಿಕಾರಿ , ಚುನಾವಣಾ ಸಮಿತಿ ಹಾಗೂ ಉಪನ್ಯಾಸಕ ವೃಂದ ಶುಭ ಹಾರೈಸಿದರು.