ಮುಕ್ಕೂರು : ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸಂಭ್ರಮದ ಪುಳಕ -ಮೂರೈದು-ಹದಿನೈದರ ಹುತ್ತರಿಯ ಪ್ರಯುಕ್ತ ಸೆ.8 ರಂದು ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆಯಿತು.
ಆರಂಭದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ಮಕ್ಕಳ ಕುಣಿತ ಭಜನ ತಂಡದಿಂದ ಒಂದು ತಾಸು ಕುಣಿತ ಭಜನೆ ನಡೆದು ಮಕ್ಕಳು ಭಕ್ತಿಲೋಕ ಸೃಷ್ಟಿಸಿದರು. ನಂತರ ಮುಕ್ಕೂರು ಅಂಗನವಾಡಿ, ಶಾಲಾ ಮಕ್ಕಳಿಂದ ಅರ್ಧ ತಾಸು ನಡೆದ ಸಾಂಸ್ಕೃತಿಕ ವೈಭವ ಮನರಂಜಿಸಿತು.
ಕುರಿಯ ವಿಶ್ವಗುರು ಭರತನಾಟ್ಯ ಕಲಾ ಶಾಲೆಯ ವಿದ್ಯಾರ್ಥಿಗಳಿಂದ 45 ನಿಮಿಷಗಳ ಕಾಲ ನಡೆದ ಭರತನಾಟ್ಯವೂ ಪ್ರೇಕ್ಷಕ ವರ್ಗವನ್ನು ಮನಸೂರೆಗೊಳಿಸಿತು. ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯಲ್ಲಿ ಬಾಲಕೃಷ್ಣ ನೆಟ್ಟಾರು ಮತ್ತು ತಂಡದಿಂದ ಮೂರು ತಾಸುಗಳ ಕಾಲ ನಡೆದ ಸಂಗೀತ ರಸಮಂಜರಿಗೆ ಪ್ರೇಕ್ಷಕ ವರ್ಗ ಜೈ ಹೋ ಎನ್ನುತ್ತಾ ಸಂಭ್ರಮಕ್ಕೆ ಮೆರಗು ತುಂಬಿತು.