Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಅಂಕಣ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ

September 13, 2024
in ಅಂಕಣ
0
“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ
Share on WhatsAppShare on FacebookShare on Twitter
Advertisement
Advertisement

ಎಲ್ಲದರಲ್ಲೂ ಧಾವಂತ ಇರುವ ಈ ಕಾಲಘಟ್ಟದಲ್ಲಿ, ವಾಣಿಜ್ಯೋದ್ಯಮದೊಂದಿಗೆ; ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ, ಶೈಕ್ಷಣಿಕ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳೂ ವೇಗವಾಗಿ ಮುಂದುವರಿಯುತ್ತಿವೆ. ಸನಾತನ ಸಂಸ್ಕೃತಿಯೂ ಇದೇ ರೀತಿ ಬೆಳೆಯಬೇಕು ಎಂಬ ಬಯಕೆ ಬಹುತೇಕರದ್ದು, ಕಾರ್ಯಕ್ರಮಗಳನ್ನು ಮಾಡಬೇಕೆಂಬ ಹಂಬಲ ಇದ್ದರೂ ಸ್ಥಳದ ಅಭಾವ, ಯೋಗ್ಯ ಪರಿಕರಗಳ ಕೊರತೆ ಹಲವರನ್ನು ಕಾಡುತ್ತದೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement

Advertisement
Advertisement

ಊಟ-ಉಪಹಾರ-ಪಾನೀಯ-ಉಪಚಾರ ಇತ್ಯಾದಿ ವಿಷಯಗಳ ನಿರ್ವಹಣೆ, ವೈದಿಕರನ್ನು ಹೊಂದಿಸುವಿಕೆ, ಪಾಕಶಾಸ್ತ್ರಜ್ಞರ ತಂಡವನ್ನು ಕರೆಸುವಿಕೆ, ದಿನಸಿ ಸಾಮಾನು, ಪೂಜಾ ಸಾಮಾಗ್ರಿಗಳ ಪಟ್ಟಿ ಹಾಗೂ ಖರೀದಿ, ಬೆಳಕು, ಧ್ವನಿ ವರ್ಧಕ, ಆಸನಗಳ ವ್ಯವಸ್ಥೆ, ಸ್ವಚ್ಛತೆ ಇತ್ಯಾದಿಗಳನ್ನು ನಿಭಾಯಿಸುವ ಕಾರ್ಯ ಅಷ್ಟು ಸುಲಭವಲ್ಲ. ಒಟ್ಟಾರೆ ಹೇಳುವುದಾದರೆ; ಒಂದು ಕಾರ್ಯಕ್ರಮವನ್ನು ನಿಶ್ಚೈಸಿ, ನೆರವೇರಿಸಿ, ಪಾತ್ರೆ- ಪರಿಕರಗಳನ್ನು ಶುಚಿಗೊಳಿಸಿ ಸ್ವಸ್ಥಾನದಲ್ಲಿ ಇಡುವ ವರೆಗಿನ ಕೆಲಸ ಸಣ್ಣದಲ್ಲ. ಯಾವುದೇ ಕಾರ್ಯಗಳನ್ನು ಮನೆಯಲ್ಲೇ ಮಾಡುವುದಾದರೆ ತುಂಬಾ ಶ್ರಮವಹಿಸಬೇಕಾಗುತ್ತದೆ.

ಆದರೆ ಈಗ; ಮನೆಯಲ್ಲಿ ಮಾಡಿದಂತೆಯೇ ಕಾರ್ಯಕ್ರಮ ಸುಗಮವಾಗಿ ನಡೆಯಲು ಏನೆಲ್ಲಾ ಕೆಲಸ ಕಾರ್ಯಗಳು ಇವೆಯೋ ಅವುಗಳನ್ನು ಸೊಗಸಾಗಿ, ಸುವ್ಯವಸ್ಥಿತವಾಗಿ, ಕ್ಲಪ್ತ ಸಮಯಕ್ಕೆ ಸರಿಹೊಂದಿಸಿ ಕಾರ್ಯಕ್ರಮಗಳನ್ನು ಒಪ್ಪ ಓರಣವಾಗಿ ನೆರವೇರಿಸುವಲ್ಲಿ, ಕಶೆಕೋಡಿ ಸೂರ್ಯ ನಾರಾಯಣ ಭಟ್ಟರ “ಕಲಾಶ್ರಯ” ಎಂಬ ಸುವ್ಯವಸ್ಥಿತ ಕಿರು ಸಭಾಭವನದ ಆಯ್ಕೆಯು ಬಹಳ ಸೂಕ್ತ ಮತ್ತು ಆಪ್ತವೆನಿಸುವುದರಲ್ಲಿ ಸಂದೇಹವಿಲ್ಲ.

ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಿರ್ಮಿತವಾದ ಈ ಸುಸಜ್ಜಿತ ಮಿನಿ ಸಭಾಭವನ ಕಲಾಶ್ರಯ ಕೇಂದ್ರವು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 100 ಮೀ. ದೂರದಲ್ಲಿದ್ದು; ವ್ಯವಸ್ಥಿತ ರೀತಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ.

ಈ ಸಭಾಭವನವು ಹಸಿರು ಸಸ್ಯರಾಶಿಯಿಂದ ಕಂಗೊಳಿಸುವ ಪ್ರಕೃತಿಯ ಸ್ವಚ್ಛ ಪರಿಸರದಲ್ಲಿದ್ದು; ನಗರದ ಗೌಜಿ ಗದ್ದಲದಿಂದ ದೂರದಲ್ಲಿದೆ.

ಇವರ ಈ ಮಿನಿ ಸಭಾಭವನದಲ್ಲಿ ಹೋಮ-ಹವನ, ಪೂಜೆ-ಪುನಸ್ಕಾರ, ಪಾರಾಯಣ, ಪ್ರವಚನ ಮಾತ್ರವಲ್ಲದೆ; ಶ್ರಾದ್ಧಾದಿ (ಪಿತೃ /ತಿಥಿ ) ಕಾರ್ಯಗಳನ್ನು ಮಾಡಲು ಬೇರೆ ಬೇರೆ ಸಭಾಂಗಣಗಳು ವ್ಯವಸ್ಥಿತ ರೀತಿಯಲ್ಲಿ ಇವೆ. ಮಾತ್ರವಲ್ಲದೆ, ಮುಂಭಾಗದಲ್ಲಿರುವ ಮಂಟಪದಲ್ಲಿ ಪೂಜೆ ಮಾಡಿ, ಆರತಿ ಬೆಳಕಿನಲ್ಲಿ ದೇವರ ಅಲಂಕಾರದ ಸೌಂದರ್ಯವನ್ನು ನೋಡುವ ಸೌಭಾಗ್ಯ ಕೂಡ ಇದೆ. ಕಲಾಶ್ರಯ ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೆ, ಧಾರ್ಮಿಕ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳಿಗೂ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

ಸ್ವಚ್ಛವಾದ, ಸುಸಜ್ಜಿತ ಸಭಾಭವನದಲ್ಲಿ 40×50 ಅಡಿ ಸಭಾಂಗಣ, ವೇದಿಕೆ, ಊಟ- ಉಪಹಾರಕ್ಕಾಗಿ ವಿಶಾಲವಾದ ಸ್ಥಳ, 150ರಿಂದ 200 ಮಂದಿಗೆ ಸೊಗಸಾದ ಆಸನ ವ್ಯವಸ್ಥೆ, ಧ್ವನಿವರ್ಧಕ, ಊಟಕ್ಕಾಗಿ ಅಚ್ಚುಕಟ್ಟಾದ ಕುರ್ಚಿ ಮೇಜುಗಳು, ಸುಮಾರು 500 ಮಂದಿಗೆ ಅಡುಗೆ ತಯಾರಿಸಲು ಬೇಕಾಗುವ ಅಗತ್ಯ ಪರಿಕರಗಳು, ಅಡುಗೆ ಪಾತ್ರೆಗಳು, ಜನರೇಟರ್ ವ್ಯವಸ್ಥೆ, ಉಳಕೊಳ್ಳಲು 3 ವಸತಿ ಕೊಠಡಿಗಳು, 2 ಡ್ರೆಸ್ಸಿಂಗ್ ಕೊಠಡಿಗಳು, ಸ್ನಾನಗೃಹ, ಶೌಚಾಲಯ, ಕುಡಿಯಲು ಹಾಗೂ ಅಡುಗೆಗೆ ಶುದ್ದೀಕರಿಸಿದ ನೀರು, ಪೂಜೆ, ಹೋಮಾದಿ ವಿವಿಧ ವೈದಿಕ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲಾ ಪಾತ್ರೆ ಸಲಕರಣೆಗಳು ವ್ಯವಸ್ಥಿತ ರೀತಿಯಲ್ಲಿ ಲಭ್ಯವಿವೆ.

ಈ ಎಲ್ಲಾ ಅನುಕೂಲತೆಗಳ ಉಪಯೋಗಕ್ಕೆ ರೂ 15000/- ಮಾತ್ರ ಬಾಡಿಗೆ ಪಡೆಯಲಾಗುವುದು. ಬಹಳ ಮೆಚ್ಚುವಂತಹ ಹಾಗೂ ಹೆಮ್ಮೆ ಪಡುವಂತಹ ವಿಶೇಷ ಗುಣವನ್ನು ಹೊಂದಿದ, ಈ ಕಾರ್ಯ ವ್ಯವಸ್ಥೆಯ ರೂವಾರಿಗಳಾದ ಶ್ರೀಯುತ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಮಾತಿನಲ್ಲಿ; ‘ಆರ್ಥಿಕವಾಗಿ ಬಹಳ ದುರ್ಬಲರಾದವರಿಗೆ ಮೇಲಿನ ಎಲ್ಲಾ ವ್ಯವಸ್ಥೆಗಳು ಸಂಪೂರ್ಣ ಉಚಿತ’ ಎನ್ನುವುದು ಪ್ರಶಂಸೆಗೆ ಪಾತ್ರವಾಗಿದೆ.

ಅಗತ್ಯವಿದ್ದಲ್ಲಿ ದಿನಸಿ, ತರಕಾರಿ, ಹಾಲು-ಮೊಸರು. ತುಪ್ಪ, ಸಮಿತ್ತುಗಳು, ವೈದಿಕರು, ಪಾಕಶಾಸ್ತ್ರಜ್ಞರು, ಊಟೋಪಚಾರ, ಪಾನೀಯ ಇತ್ಯಾದಿಗಳ ಪೂರೈಕೆಯ ಸೇವೆಗಾಗಿ ಜನರ ವ್ಯವಸ್ಥೆಯನ್ನೂ ಮಾಡಿಕೊಡುತ್ತಾರೆ.

ವಿಶೇಷವಾಗಿ, ಗೋ ಗ್ರಾಸ ನೀಡಲು ಪ್ರತ್ಯಕ್ಷ ಗೋ ಮಾತೆಯೇ ಇಲ್ಲಿ ಇದ್ದಾಳೆ. ಮೊದಲು ಗೋವಿಗೆ ನೀಡಿದ ಬಳಿಕ ನಾವು ಊಟ ಮಾಡುವ ತೃಪ್ತಿ ನಮ್ಮದಾಗುತ್ತದೆ. ಇನ್ನೂ ಮುಖ್ಯವಾಗಿ ಹೇಳಬೇಕಾದರೆ; ಸೂರ್ಯನಾರಾಯಣ ಭಟ್ಟರ ಪತ್ನಿ, ಸುಧಾ ಅಕ್ಕನವರು ಬಹಳ ಅಚ್ಚುಕಟ್ಟು, ಶುಭ್ರತೆ, ಸ್ವಚ್ಛ ವ್ಯವಹಾರ, ಭಕ್ತಿ ಪೂರ್ವಕವಾಗಿ ಕಾರ್ಯಕ್ರಮ ನಡೆಸುವಲ್ಲಿ ಸಂಪೂರ್ಣ ಸಹಕಾರ ನೀಡುತ್ತಾರೆ.

ಈ ಸಭಾಭವನದ ಸಮೀಪದಲ್ಲಿ, ಶ್ರೀ ಪಾರ್ವತಿ ಮ್ಯಾನೇಜ್‌ಡ್ ಫಾರ್ಮ್ ಲ್ಯಾಂಡ್ಸ್ ಎಂಬ ಸುಂದರವಾದ ವಸತಿ ಸಮುಚ್ಚಯವು ನೂತನ ತೋಟಗಾರಿಕಾ ಪರಿಕಲ್ಪನೆಯಲ್ಲಿ, ಪ್ರಸಿದ್ಧ ಮುಳಿಯ ಸಂಸ್ಥೆಯಿಂದ ಅಭಿವೃದ್ಧಿಗೊಳ್ಳುತ್ತಲಿದೆ.

ಈ ಸಭಾಭವನವನ್ನು ಅಗತ್ಯವಿರುವವರು ಬಳಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ನೆರವೇರಿಸಿ, ಸಂತೃಪ್ತ ಭೋಜನವನ್ನು ನೀಡಿ, ಭಾವನಾತ್ಮಕವಾದ ಮಾನಸಿಕ ನೆಮ್ಮದಿ ಪಡೆಯಬಹುದು.

ಬರಹ : ಕೇಶವಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿ ಪ್ರಸಾದ್ ದಂಪತಿಗಳು

Advertisement
Previous Post

ಮಂಗಳೂರು : ಹಳೆ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿತ : ಇಬ್ಬರು ಮೃತ್ಯು!

Next Post

ನಾಗಮಂಗಲ ಗಲಭೆ ಪ್ರಕರಣ : 52 ಮಂದಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

OtherNews

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ
ಅಂಕಣ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ

October 22, 2024
66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!
ಅಂಕಣ

66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!

September 27, 2024
“ಮಾನವೀಯತೆ” ಎಂಬ ಬೊಗಳೆ
ಅಂಕಣ

“ಮಾನವೀಯತೆ” ಎಂಬ ಬೊಗಳೆ

July 6, 2024
ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ
ಅಂಕಣ

ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ

October 21, 2023
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ
ಅಂಕಣ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ

September 29, 2023
“ಶ್ರೀಕೃಷ್ಣ”ನ ಕೊಳಲಿಗೆ ತಲೆದೂಗದವರ್ಯಾರು : ಪವಾಡಗಳಿಂದಲೇ ಜೀವನದ ಮಾರ್ಗ ತೋರಿಸಿದ ‘ಮಾಧವ’
ಅಂಕಣ

“ಶ್ರೀಕೃಷ್ಣ”ನ ಕೊಳಲಿಗೆ ತಲೆದೂಗದವರ್ಯಾರು : ಪವಾಡಗಳಿಂದಲೇ ಜೀವನದ ಮಾರ್ಗ ತೋರಿಸಿದ ‘ಮಾಧವ’

September 6, 2023

Leave a Reply Cancel reply

Your email address will not be published. Required fields are marked *

Recent News

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

May 9, 2025
ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

May 9, 2025
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

May 9, 2025
ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

May 9, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page