ಮುಂಡೂರು : ಮುಂಡೂರು ಗ್ರಾಮದ ಮರ್ತಡ್ಕ ಎಂಬಲ್ಲಿ ಕೊರೊನ ರೋಗಿಯೊಬ್ಬರು ಮಧ್ಯರಾತ್ರಿ ಉಸಿರಾಟದ ತೊಂದರೆ ಯಿಂದ ಬಳಲುತ್ತಿದ್ದರು, ಮನೆಯವರು ಆಶಾ ಕಾರ್ಯಕರ್ತೆ ಲತಾ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ತಕ್ಷಣವೇ ಸ್ಥಳೀಯ ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ ಮತ್ತು ಬಾಲಕೃಷ್ಣ ಪೂಜಾರಿ, ಅರುಣ್ ಪುತ್ತಿಲರಿಗೂ ವಿಚಾರ ತಿಳಿದು ಕೂಡಲೇ ಸರ್ವೆ ಆರೋಗ್ಯಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಆಸ್ಪತ್ರೆಗೆ ದಾಖಲು ಮಾಡುವಂತೆ ಆರೋಗ್ಯಾಧಿಕಾರಿಗಳು ತಿಳಿಸಿದ ಕ್ಷಣವೇ ಶ್ರೀರಾಮ ಗೆಳೆಯರ ಬಳಗದ ಮೂಲಕ ಶಾಸಕರ ವಾರ್ ರೂಮ್ ನ ಸಂಜೀವಿನಿ ಆಂಬುಲೆನ್ಸ್ ಅನ್ನು ಸಂಪರ್ಕಿಸಿ ಹಿಂದೂ ಜಾಗರಣ ವೇದಿಕೆಯ ಮನೀಶ್ ಬನ್ನೂರು ಹಾಗೂ ಮನೋಜ್ ಪಿ ಪಿ ಕಿಟ್ ಧರಿಸಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು.
ಈ ಮೂಲಕ ನಡುರಾತ್ರಿಯ ಕ್ಲಿಷ್ಟತೆ ಮಧ್ಯೆಯೂ ಸಂಘಟನೆ ಹಾಗೂ ಆಶಾಕಾರ್ಯಕರ್ತೆಯರ ಸಾಮಾಜಿಕ ಕಳಕಳಿಯನ್ನು ಮೆಚ್ಚಲೇಬೇಕು.