ಪುತ್ತೂರು : ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಲೌಕ್‌ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟಕ್ಕೀಡಾಗಿರುವ ಕಲ್ಲಾರೆ ಮತ್ತು ಸಾಮೆತ್ತಡ್ಕ ಪರಿಸರದ ಬಡ ಕುಟುಂಬಗಳಿಗೆ ದಾನಿಗಳು ಅಗತ್ಯ ಸಾಮಾಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಸುಮಾರು 60 ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಪೊಟ್ಟಣವನ್ನು ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ಇವರ ನೇತೃತ್ವದಲ್ಲಿ ಶಾಸಕ ಸಂಜೀವ ಮಠಂದೂರುರವರು ಕಲ್ಲಾರೆ ಶ್ರೀಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ಜೂ.11ರಂದು ವಿತರಣೆ ಮಾಡಿದರು.
ರಾಘವೇಂದ್ರ ಉಡುಪ ಕಲ್ಲಾರೆ, ರವೀಂದ್ರನ್ ದೇವಾ ಟ್ರೇಡರ್ಸ್, ಸುರೇಶ್ ಶೆಟ್ಟಿ ಸಿಟಿಓ ರಸ್ತೆ, ಸತ್ಯ ಶಂಕರ್ ಭಟ್, ದಿನೇಶ್ ಸಿಟಿಓ ರಸ್ತೆ, ಜಯಂತಿ, ಯಶೋದ ಟೀಚರ್ ಪರ್ಲಡ್ಕ, ಎಚ್ ಬಾಬು ಹೆಬ್ಬಾರ ಬೈಲು, ಚಿದಾನಂದ ರೈ ಕಲ್ಲಾರೆ, ವಿನೋದ್ ಕಲ್ಲಾರೆ, ಪ್ರವೀಣ್ ಶಾಂಭವಿ ಏಜೆನ್ಸಿ ಕಲ್ಲಾರೆ, ಸುರೇಶ್ ಕಾಮತ್ ಕಲ್ಲಾರೆ, ಸೂರಜ್ ನಾಯರ್ ಕಲ್ಲಾರೆ, ಸುರೇಶ್ ಗೌಡ ಕಲ್ಲಾರೆ, ನಾರಾಯಣ ನಾಯ್ಕ ಸಿಟಿಓ ರಸ್ತೆ, ಜಗನ್ನಾಥ ರೈ ಸಿಟಿಓ ರಸ್ತೆ, ಸೂರ್ಯನಾಥ ಆಳ್ವ ಸಿಟಿಓ ರಸ್ತೆ, ನಿವೃತ್ತ ಉಪ ತಹಶೀಲ್ದಾರ್ ಜಗನ್ನಾಥ್ ರೈ ದಾನಿಗಳಾಗಿ ಸಹಕರಿಸಿದರು. ಶ್ರೀ ಗುರು ರಾಘವೇಂದ್ರ ಮಠ ಇದರ ಕಾರ್ಯದರ್ಶಿ ಯು.ಪೂವಪ್ಪ, ಭಾರತೀಯ ಜನತಾ ಪಾರ್ಟಿ ಕಲ್ಲಾರೆ ಸಾಮೆತ್ತಡ್ಕ 23 ವಾರ್ಡ್‌ನ ಅಧ್ಯಕ್ಷ ಮುರಳೀಧರ್ ಕಲ್ಲಾರೆ, ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.