ಕುಂಬ್ರ : ಅಂಗಡಿಯೊಂದರ ಮುಂಭಾಗ ಕುಳಿತಿದ್ದ ವ್ಯಕ್ತಿಯೊಬ್ಬರು ಅಂಗಡಿ ಸಮೀಪದ ಮೋರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಜೂ.12 ರಂದು ಕುಂಬ್ರ ಸಮೀಪದ ತಿಂಗಳಾಡಿ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಅವರು ಅಂಗಡಿಯೊಂದರ ಮುಂಭಾಗ ಕುಳಿತಿದ್ದು, ಆಕಸ್ಮಿಕವಾಗಿ ಮೋರಿಗೆ ಬಿದ್ದರು ಎನ್ನಲಾಗಿದೆ. ನಿನ್ನೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಮೋರಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು,ಅಬೂಬಕ್ಕರ್ ರವರು ಬಿದ್ದ ಸಂದರ್ಭದಲ್ಲಿ ಸಮೀಪದಲ್ಲಿ ಯಾರೂ ಇಲ್ಲದ ಕಾರಣ ಅವರು ನೀರಿನಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.