ಇದೊಂದು ಊರು ಸೋಮವಾರ ರಾತ್ರಿಯೇ ಬೆಚ್ಚಿ ಬೀಳುತ್ತದೆ. ಅದರಲ್ಲೂ ಊರಿನ ಜನರಂತೂ ನಾಳೆ ಏನಾಗುತ್ತೋ? ಯಾರ ಮನೆ ನೋವಿಗೆ ತುತ್ತಾಗುತ್ತೋ? ಅನ್ನೋ ಭಯದಲ್ಲೇ ಬದುಕುತ್ತಿದ್ದಾರೆ. ಅದು ಕಾಕತಾಳೀಯವೋ? ವಿಚಿತ್ರವೋ? ಪ್ರತಿ ಮಂಗಳವಾರ ಈ ಊರಿನಲ್ಲಿ ಒಂದಾದ್ರೂ ಸಾವು ಘಟಿಸುತ್ತಲೇ ಇದೆ. ಹಾಗಾಗಿಯೇ ಇಡೀ ಊರು ಅಕ್ಷರಶಃ ಬೆಚ್ಚಿ ಬಿದ್ದಿದೆ.
ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಜಮ್ಮಿಗಡ್ಡ ಜನ ಬೆಚ್ಚಿ ಬಿದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ವಿಲಕ್ಷಣವಾಗಿ ಜನ ಸಾಯುತ್ತಿದ್ದಾರೆ. ಪ್ರತಿ ಮಂಗಳವಾರ ಬಂದರೆ ಸಾಕು ಊರಿನ ಜನ ಏನಾಗುತ್ತೋ? ಯಾರ ಮನೆಯಲ್ಲಿ ಸಾವಾಗುತ್ತೋ? ಅನ್ನೋ ವಿಲಕ್ಷಣ ಭಯದಲ್ಲೇ ಬದುಕುತ್ತಿದ್ದಾರೆ. ಯಾಕಂದ್ರೆ ಎರಡು ತಿಂಗಳಿನಲ್ಲಿ 10 ಮಂದಿ ಪ್ರತೀ ಮಂಗಳವಾರ ಒಂದಿಲ್ಲೊಂದು ಕಾರಣಕ್ಕೆ ಮೃತರಾಗುತ್ತಲೇ ಇದ್ದಾರೆ.
ಮೂಢನಂಬಿಕೆ ಅಂತಾದ್ರೂ ಅಂದುಕೊಳ್ಳಿ, ಭಯ ಅಂತಾದ್ರೂ ಅಂದುಕೊಳ್ಳಿ. ಮಂಗಳವಾರದ ಸಾವಿನ ಭಯಕ್ಕೆ ಇಡೀ ಊರು ಭಾನುವಾರ ಪರಿಹಾರ ಹುಡುಕುತ್ತಿದೆ. ಕಳೆದ ಎರಡು ತಿಂಗಳಿನಿಂದ ಎದುರಾಗ್ತಿರೋ ಭಯಾನಕ ಸಾವಿನ ಸರಣಿ ನಿಲ್ಲಿಸೋದಕ್ಕೆ ಸ್ವಾಮೀಜಿಯೊಬ್ಬರು ಕೊಟ್ಟ ಸಲಹೆ ಸ್ವೀಕರಿಸಿದೆ ಇಡೀ ಗ್ರಾಮ. ಶನಿವಾರ ಮಧ್ಯರಾತ್ರಿಯೇ ಊರು ಬಿಡುವ ಗ್ರಾಮಸ್ಥರು ಊರಾಚೆಯ ಹೊಲಗಳಲ್ಲಿ ವನ ಭೋಜನ ಮಾಡುತ್ತಿದ್ದಾರೆ. ಹೀಗೆ ಮಾಡಿದ್ರೆ ಊರಿನಲ್ಲಿ ಮಂಗಳವಾರದ ಸಾವಿನ ಕೇಡು ಮರುಕಳಿಸೋದಿಲ್ಲ ಅನ್ನೋ ನಂಬಿಕೆ ಮನೆ ಮಾಡಿದೆ.