ವಿಟ್ಲ: ಆಟೋ ಚಾಲಕನೊಬ್ಬ ನಾಪತ್ತೆಯಾದ ಘಟನೆ ವಿಟ್ಲದಲ್ಲಿ ನಡೆದಿದೆ.
ಧನರಾಜ್ (28) ನಾಪತ್ತೆಯಾದ ಆಟೋ ಚಾಲಕ.
ಧನರಾಜ್ ನ.28 ರಂದು ಎಂದಿನಂತೆ ವೀರಕಂಭ ಗ್ರಾಮದ ಬಾಯಿಲದಿಂದ ಬೆಳಗ್ಗೆ ಆಟೋ ತೆಗೆದುಕೊಂಡು ಬಾಡಿಗೆಗೆ ಹೋಗುತ್ತೇನೆ ಎಂದು ಹೇಳಿ ಹೋದವನು ಇದುವರೆಗೂ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.
ರಿಕ್ಷಾ ಉಪ್ಪಿನಂಗಡಿ ಸಮೀಪ ಪತ್ತೆಯಾಗಿದ್ದು ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ವಿಟ್ಲ ಠಾಣೆಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.