ಪುತ್ತೂರು : ಕೋವಿಡ್ -19 ಸಾಂಕ್ರಾಮಿಕ ಕಾಯಿಲೆಯು ಹರಡುತ್ತಿರುವ ಹಿನ್ನೆಯಲ್ಲಿ ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಘೋಷಿಸಿರುವ ಕಾರಣದಿಂದ ಬಡ ಜನರು ದುಡಿಮೆ ಇಲ್ಲದೆ ದಿನ ನಿತ್ಯದ ಆಹಾರ ಸಾಮಾಗ್ರಿಗಳಿಗೆ ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಂಟ್ಯಾರ್ , ಜಿಡೆಕಲ್ಲು, ನೆಹರುನಗರ , ಸಂಪ್ಯ ಭಾಗದ ಆಯ್ದ
ಹಲವು ಬಡ ಕುಟುಂಬಗಳಿಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರು , ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಅಕ್ಕಿ , ತರಕಾರಿ, ದಿನಸಿಯ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ವಿತರಿಸಿದರು.